Home ಜಿಲ್ಲೆ ಕಲಬುರಗಿ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದಲ್ಲಿ ಡಾ. ಅಂಬೇಡ್ಕರರ 135 ನೇ ಜನ್ಮ ದಿನಾಚರಣೆ

ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದಲ್ಲಿ ಡಾ. ಅಂಬೇಡ್ಕರರ 135 ನೇ ಜನ್ಮ ದಿನಾಚರಣೆ

ಸೋಲಾಪುರ,ಏ 16: ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಬುಧವಾರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಭಾರತ ರತ್ನ ಡಾ. ಭೀಮರಾವ್ ರಾಮಜಿ ಅಂಬೇಡ್ಕರರ 135 ನೇ ಜನ್ಮ ದಿನಾಚರಣೆಯನ್ನು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು ಎಂದು
ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‍ಎಂ) ಬಾ.ಸುಜಿತ ಮಿಶ್ರಾ ಮತ್ತು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಡಿಆರ್‍ಎಂ) ಅಂಶುಮಾಲಿ ಕುಮಾರ್ ಅವರು ದಾರ್ಶನಿಕ ನಾಯಕ, ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು. ದಿನಾಚರಣೆ ಅಂಗವಾಗಿ ಸಾಮೂಹಿಕ ಬುದ್ಧ ವಂದನೆಯನ್ನು ಸಹ ಮಾಡಲಾಯಿತು.

ಪ್ರಬಂಧ ಸ್ಪರ್ಧೆಯ ವಿಜೇತರನ್ನು ಡಿಆರ್‍ಎಂ ಸನ್ಮಾನಿಸಿದರು ಮತ್ತು ನಗದು ಬಹುಮಾನ ಹಾಗೂ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಿದರು. ಪ್ರಬಂಧ ಸ್ಪರ್ಧೆಯ ವಿಷಯ “ಡಾ. ಬಿ.ಆರ್. ಅಂಬೇಡ್ಕರ್: ಭಾರತದಲ್ಲಿ ಸಾಮಾಜಿಕ ನ್ಯಾಯದ ಶಿಲ್ಪಿ” ಇತ್ತು.

ಈ ಸಂದರ್ಭದಲ್ಲಿ ಡಿಆರ್‍ಎಂ ಡಾ.ಸುಜಿತ ಮಿಶ್ರಾ, ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಪೂರ್ತಿದಾಯಕ ಆಲೋಚನೆಗಳು, ಮೌಲ್ಯಗಳು ಮತ್ತು ಅಸಾಧಾರಣ ಕೊಡುಗೆಗಳ ಬಗ್ಗೆ ವಿವರಿಸಿದರು. ಡಾ. ಅಂಬೇಡ್ಕರ್ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಕರೆ ನೀಡಿದರು.

ಸಿಬ್ಬಂದಿ ಇಲಾಖೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಡಿಆರ್‍ಎಂ ಕಚೇರಿಯ ಅಧಿಕಾರಿಗಳು ಮತ್ತು ಮಾನ್ಯತೆ ಪಡೆದ ಒಕ್ಕೂಟಗಳು ಮತ್ತು ಇತರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.