Home ಜಿಲ್ಲೆ 10 ಭಾರತೀಯರ ಗುರುತಿಸಿದ ಫೋಬ್ರ್ಸ್ ನಿಯತಕಾಲಿಕೆಡಾ. ಅಬ್ದುಲ್ ಖದೀರ್ ‘ಲೀಡರ್ ಆಫ್ ಟುಮಾರೋ’

10 ಭಾರತೀಯರ ಗುರುತಿಸಿದ ಫೋಬ್ರ್ಸ್ ನಿಯತಕಾಲಿಕೆಡಾ. ಅಬ್ದುಲ್ ಖದೀರ್ ‘ಲೀಡರ್ ಆಫ್ ಟುಮಾರೋ’

ಬೀದರ್: ಏ.16:ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರೂ ಆದ ಶಿಕ್ಷಣ ತಜ್ಞ ಡಾ.
ಅಬ್ದುಲ್ ಖದೀರ್ ಅವರನ್ನು ಫೆÇೀಬ್ರ್ಸ್ ಇಂಡಿಯಾ ನಿಯತಕಾಲಿಕೆಯು ‘ಲೀಡರ್ ಆಫ್ ಟುಮಾರೋ’
ಎಂದು ಗುರುತಿಸಿದೆ.
ವಿಶಿಷ್ಟ ಸಾಧನೆ ಮೂಲಕ ತಮ್ಮ ಛಾಪು ಮೂಡಿಸಿದ 10 ಭಾರತೀಯರನ್ನು ಫೆÇೀಬ್ರ್ಸ್ ಇಂಡಿಯಾ
ನಾಳೆಯ ನಾಯಕರೆಂದು ಗುರುತಿಸಿದ್ದು, ಅದರಲ್ಲಿ ಡಾ. ಅಬ್ದುಲ್ ಖದೀರ್ ಅವರು ಸ್ಥಾನ
ಪಡೆದಿರುವುದು ವಿಶೇಷವಾಗಿದೆ.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯ ವಾಹಿನಿಗೆ ತರಲು ಶಾಹೀನ್ ಶಿಕ್ಷಣ ಸಂಸ್ಥೆಗಳ
ಸಮೂಹ ಜಾರಿಗೊಳಿಸಿದ ಶೈಕ್ಷಣಿಕ ತೀವ್ರ ನಿಗಾ ಘಟಕ (ಎ.ಐ.ಸಿ.ಯು.) ಮಾದರಿಯನ್ನು
ಫೆÇೀಬ್ರ್ಸ್ ಇಂಡಿಯಾ ಪ್ರಶಂಸಿಸಿದೆ.

ಎ.ಐ.ಸಿ.ಯು. ಉದಯ:

ಬೀದರನಲ್ಲಿ ಮೊದಲು ವಿದ್ಯಾರ್ಥಿಗಳು ಓದನ್ನು ಮುಂದುವರಿಸಲು ಸಂಜೆ ಖಾಸಗಿ
ಟ್ಯೂಷನ್‍ಗಳನ್ನು ಅವಲಂಬಿಸಿದ್ದರು. ಟ್ಯೂಷನ್ ಸಮಸ್ಯೆ ದೂರ ಮಾಡಲು ಶಾಹೀನ್ ಶಾಲಾ
ಸಮಯದಲ್ಲೇ ವೈಯಕ್ತಿಕ ಗಮನ ನೀಡಲು ವಿಶೇಷ ಕಾರ್ಯಕ್ರಮ ಜಾರಿಗೊಳಿಸಿತು. ಬಳಿಕ ಟ್ಯೂಷನ್
ಅವಲಂಬನೆ ಕಡಿಮೆಯಾಯಿತು. ಅನಂತರ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ
ತರಲು ಸಂಸ್ಥೆ ರೂಪಿಸಿದ ಯೋಜನೆಯೇ ಎ.ಐ.ಸಿ.ಯು.
ಸಮೂಹವು ಯೋಜನೆಯಡಿ ಆರು ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರನ್ನು ನೇಮಕ ಮಾಡಿತು.
ಮಾತೃಭಾಷೆ ಸೇರಿದಂತೆ ಮಕ್ಕಳ ಬೇಸಿಕ್ ಬಲಪಡಿಸಿ, ಕಲಿಕಾ ಕೊರತೆಗಳನ್ನು ನಿವಾರಿಸುವ
ಕಡೆಗೆ ಹೆಚ್ಚಿನ ಗಮನ ಹರಿಸಿತು. ಇದರಿಂದ ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದಲು
ಆರಂಭಿಸಿದರು.
ನಂತರ ಎಐಸಿಯು ಅನ್ನು ಮದರಸಾ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿತು. ಔಪಚಾರಿಕ
ಶಿಕ್ಷಣದ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನೂ ಮುಖ್ಯವಾಹಿನಿಗೆ ತರಲಾರಂಭಿಸಿತು.
ಎ.ಐ.ಸಿ.ಯು. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿತು. ಫಲವಾಗಿ
ಶಾಲೆ ಬಿಟ್ಟ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್.,
ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸಗಳ ಸೀಟುಗಳನ್ನು ಪಡೆದರು. ಸಾಧಕರಾಗಿ
ಹೊರ ಹೊಮ್ಮಿದರು.
ಸಮೂಹವು ಬೀದರ್ ಜಿಲ್ಲೆಯ ಸರ್ಕಾರಿ ಶಾಲೆಗಳಿಗೂ ಎಐಸಿಯು ಪರಿಚಯಿತು. 10ನೇ ಫಲಿತಾಂಶ
ಹಾಗೂ ಮೂಲಭೂತ ಮಟ್ಟ ಸುಧಾರಿಸುವತ್ತ ಗಮನ ಹರಿಸಿತು. ಸರ್ಕಾರಿ ಶಾಲೆ ಶಿಕ್ಷಕರಿಗೆ ಈ
ಕುರಿತು ತರಬೇತಿ ಹಾಗೂ ಸಹಕಾರ ಕೂಡ ನೀಡಿತು.
ಕಲ್ಯಾಣ ಕರ್ನಾಟಕ ತಜ್ಞರ ಸಮಿತಿ ತನ್ನ ವರದಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ
ಮುಖ್ಯ ವಾಹಿನಿಗೆ ತರುವ ಬೀದರನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಎಐಸಿಯು
ಮಾದರಿಯನ್ನು ವಿಶೇಷವಾಗಿ ಉಲ್ಲೇಖಿಸಿದೆ.
ಎಐಸಿಯು 16 ವರ್ಷಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಲು
ಶ್ರಮಿಸುತ್ತಿದೆ. ಹಾಫೇಜ್, ಮದರಸಾ ಹಾಗೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ
ಪ್ರಗತಿಗೆ ನೆರವಾಗಿದೆ.
ಮದರಸಾ ಪ್ಲಸ್: ಶಾಹೀನ್ 2023 ರಲ್ಲಿ 18 ತಿಂಗಳ ಶೈಕ್ಷಣಿಕ ಮುಖ್ಯಧಾರೆಯ ಕಾರ್ಯಕ್ರಮ
ಮದರಸಾ ಪ್ಲಸ್ ಅನುಷ್ಠಾನಗೊಳಿಸಿತು.
52 ಮದರಸಾಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಪರೀಕ್ಷೆಗೆ ಹಾಜರಾದ 975
ವಿದ್ಯಾರ್ಥಿಗಳಲ್ಲಿ 785 (ಶೇ 80) ರಷ್ಟು ವಿದ್ಯಾರ್ಥಿಗಳು ಯಶ ಕಂಡಿದ್ದಾರೆ.
ಯೋಜನೆಯಡಿ ಮದರಸಾಗಳಿಗೆ ಶಿಕ್ಷಕರು, ಪಠ್ಯಕ್ರಮ ಹಾಗೂ ಶೈಕ್ಷಣಿಕ ಬೆಂಬಲ ಸಹ ನೀಡಿದೆ.
2024 ರಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 5 ಸಾವಿರ ಮದರಸಾ ವಿದ್ಯಾರ್ಥಿಗಳಿಗೆ
10ನೇ ಶಿಕ್ಷಣ ನೀಡಲು ಪ್ರಾರಂಭಿಸಿತು. ಈಗ ಅದು 100ಕ್ಕೂ ಹೆಚ್ಚು ಮದರಸಾಗಳಿಗೆ
ವಿಸ್ತರಣೆಗೊಂಡಿದೆ.
ಎಂಬಿಬಿಎಸ್ ಅವಕಾಶ:
ಡಾ. ಅಬ್ದುಲ್ ಖದೀರ್ ಅವರು ವಿದೇಶದಲ್ಲಿ ಎಂ.ಬಿ.ಬಿ.ಎಸ್. ಕಾಲೇಜುಗಳ ಸ್ಥಾಪನೆ ಮೂಲಕ
ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶ
ಒದಗಿಸುತ್ತಿದ್ದಾರೆ. 1989 ರಲ್ಲಿ ಆರಂಭವಾದ ಶಾಹೀನ್ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ
ಇಂದು ದೇಶದಾದ್ಯಂತ 116ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 45
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪ್ರಶಸ್ತಿ-ಸಮ್ಮಾನ: ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಾಗಿ ಡಾ. ಅಬ್ದುಲ್ ಖದೀರ್
ಅವರಿಗೆ ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯದ ಸರ್ ಸೈಯದ್ ನ್ಯಾಷನಲ್ ಎಕ್ಸಲೆನ್ಸ್
ಅವಾರ್ಡ್, ಸ್ಕೌಟ್ಸ್ ಆಯಿಂಡ್ ಗೈಡ್ಸ್‍ನ ಅತ್ಯುನ್ನತ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಉರ್ದು
ಅಕಾಡೆಮಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ವಿವಿಧ
ಪ್ರಶಸ್ತಿ- ಸಮ್ಮಾನಗಳು ಸಂದಿವೆ.
ಫೆÇೀಬ್ರ್ಸ್ ಇಂಡಿಯಾ ಜಾಗತಿಕ ಮಟ್ಟದ ನಿಯತಕಾಲಿಕೆ ಫೆÇಬ್ರ್ಸನ ಭಾರತೀಯ ಆವೃತ್ತಿಯಾಗಿದೆ.