
ಶ್ರೀ ಮುರುಗನ್ ದೇವಸ್ಥಾನ ಮುಂಭಾಗದ ಗೂಡ್‌ಶೆಡ್ ರಸ್ತೆಯಲ್ಲಿ ಚಾಮರಾಜ ಪೇಟೆ ಬಿಜೆಪಿ ಮಂಡಲ ಛಲವಾದಿ ಪಾಳ್ಯ ವಾರ್ಡ್ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್ ರವರು ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು. ಬಿಜೆಪಿ ಮುಖಂಡರಾದ ನಾಗಲಿಂಗಂ, ಪ್ರಕಾಶ್ ಬಾಬು, ಚಕ್ರಪಾಣಿ, ಸಂಪತ್, ಕೃಷ್ಣ, ಮೋಹನ್, ಅಧ್ಯಕ್ಷ ಕಾರ್ತಿಕ್, ಮಂಡಲ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಅಪ್ಪು ಮತ್ತಿತರರು ಉಪಸ್ಥಿತರಿದ್ದರು.
























