
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ :ನ.20- ಸಹಕಾರ ಸಂಘವು ಆರ್ಥಿಕ ಸದೃಡತೆಗೆ ಸಹಕರಿಯಾಗಿದೆ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಡಿ. ದೇವರಾಜ ಅರಸು ಭವನದಲ್ಲಿ ಸಹಕಾರ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರವು ಪ್ರತಿಯೊಬ್ಬರ ಸದಸ್ಯರ ಹಿತ ಕಾಯುವ ಕೆಲಸ ಮಾಡುತ್ತದೆ.
ರಾಜಕೀಯವಿಲ್ಲದ ಆರ್ಥಿಕ ಸಭಲೀಕರಣದ ಪಾರದರ್ಶಕ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ದೊರೆಯುತ್ತದೆ. ಸರ್ಕಾರ ಕೂಡ ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಸಹಕಾರ ಸಂಘವಿರಬೇಕು ಎಂಬ ಆಶಯ ಹೊಂದಿದೆ. ನಮ್ಮ ರೈತರು ಕೂಡ ಸಕಾಲಕ್ಕೆ ಈ ಸಾಲವನ್ನು ಮರುಪಾವತಿಸಿ ಸಂಸ್ಥೆಯಲ್ಲಿ ಉತ್ತಮ ಹೆಸರು ಗಳಿಸಬೇಕು ಎಂದರು.
ಸಂಘದಲ್ಲಿ ಐದು ಲಕ್ಷದಷ್ಟು ಶೂನ್ಯ ಬಡ್ಡಿಯ ಸಾಲ ಸೌಲಭ್ಯವನ್ನು ರೈತರಿಗೆ ನೀಡಲಾಗುತ್ತಿದೆ.ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಹಾಲಿನ ದರವನ್ನು ಹೆಚ್ಚಿಸಿ ಹಾಲು ಉತ್ಪಾದಕರ ಪರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕಂಪಲಾಪುರ ಕುಮಾರ್, ಎಂ ಡಿ ಸಿ ಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕರು ಲೋಕೇಶ್, ಮಾತನಾಡಿದರು ಹಾಗೂ ವಿವಿಧ ಸಹಕಾರಿ ಕ್ಷೇತ್ರದ ಸದಸ್ಯರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರ ಮಂಡಳದ ನಿವೃತ್ತ ನಿರ್ದೇಶಕ ಎನ್.ಎಂ. ಶಿವಕುಮಾರ್, ಮಾಜಿ ಮೈಮುಲ್ ನಿರ್ದೇಶಕ ಪ್ರಕಾಶ್ ಪೂನಡಹಳ್ಳಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ನಿರ್ದೇಶಕ, ಹಿಟ್ಗಳ್ಳಿ ಪರಮೇಶ್, ಡಿ.ಟಿ.ಸ್ವಾಮಿ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹಿತೇಂದ್ರ ಸೇರಿದಂತೆ ಇತರರಿದ್ದರು.





















