Home ಜಿಲ್ಲೆ ಬೆಂಗಳೂರು ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ೬ ಸಾವಿರ ಮಂದಿ ಭಾಗಿ

ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ೬ ಸಾವಿರ ಮಂದಿ ಭಾಗಿ

ಕೋಲಾರ,ಜೂ,೧೫- ಕಾಂಗ್ರೇಸ್ ಪಕ್ಷದ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅವರು ಜೂ ೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ ಕಾಂಗ್ರೇಸ್ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು. ಲೋಕ ಸಭಾ ಸದಸ್ಯರು .ಎ.ಐ.ಸಿ.ಸಿ. ಪದಾಧಿಕಾರಿಗಳು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ನಿಕಟ ಪೂರ್ವ ಕೆ.ಪಿ.ಸಿ.ಸಿ.ಅಧ್ಯಕ್ಷರು ಹಾಗೂ ನೂತನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ ತಿಳಿಸಿದರು


ನಗರದ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರ ಪದಗ್ರಹಣ ಸ್ವೀಕಾರ ಸಮಾರಂಭದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ಇದೇ ಸಂದರ್ಭದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಎ.ಐ.ಸಿ.ಸಿ. ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ೩ ವರ್ಷ ರಾಜ್ಯದಲ್ಲಿ ಯಶಸ್ವಿ ಆಡಳಿತ ನಡೆಸಿದ ಗೌರವದ ಪೂರ್ವಕವಾಗಿ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದರು.


ಎ,ಐ,ಸಿ.ಸಿ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅವಿರೋಧವಾಗಿ ರಾಜ್ಯ ಸಭೆ ಸದಸ್ಯರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಇವರನ್ನು ಸಹ ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಒಟ್ಟಾರೆ ಈ ಮೂರು ಕಾರ್ಯಕ್ರಮಗಳು ರಾಜ್ಯ ಕಾಂಗ್ರೇಸ್ ಪಕ್ಷದ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಕಾಂಗ್ರೇಸ್ ಪಕ್ಷದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜಿತ್‌ವಾಲ ಹಾಗೂ ವೇಣುಗೋಪಾಲ್ ಅವರುಗಳು ಉಪಸ್ಥಿತಿರುವರು ಎಂದು ಹೇಳಿದರು


ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೇಸ್ ಪಕ್ಷದ ಬೇರು ಮಟ್ಟದಿಂದ ಬೆಳೆದವರು,ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಎಲ್ಲಾ ಸ್ಥಾನಮಾನಗಳನ್ನು ಪಕ್ಷದಲ್ಲಿ ಪಡೆದವರು. ವಿದ್ಯಾರ್ಥಿ ದೆಸೆಯಲ್ಲಿ ಎನ್.ಎಸ್.ಯು.ಐ. ಯುವ ಕಾಂಗ್ರೇಸ್ ಅಧ್ಯಕ್ಷರಾಗಿ .ವಿಧಾನ ಪರಿಷತ್ ಸದಸ್ಯರಾಗಿ. ರಾಜ್ಯ ಸೇವಾದಳ ಅಧ್ಯಕ್ಷರಾಗಿ. ರಾಜ್ಯ ಸಭಾ ಸದಸ್ಯರಾಗಿ, ಸುಮಾರು ೨೦ ರಾಜ್ಯಗಳ ಉಸ್ತುವಾರಿಯಾಗಿ ಸೇರಿದಂತೆ ಕಾಂಗ್ರೇಸ್ ಪಕ್ಷದ ವಿವಿಧ ಘಟಕಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಹಿರಿಯ ಅನುಭವಿಗಳಾಗಿದ್ದಾರೆ. ಅವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಲು ಮುಂದಾಗಿದ್ದ ಸಂದರ್ಭದಲ್ಲಿ ಸೋನಿಯ ಗಾಂಧಿಯವರು ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿ ೨೦೨೮ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮರಳಿ ಕಾಂಗ್ರೇಸ್ ಅಧಿಕಾರಕ್ಕೆ ಬರುವಂತೆ ಮಾಡ ಬೇಕೆಂಬ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂದು ವಿವರಿಸಿದರು.


ಮುಂದಿನ ಎರಡು ವರ್ಷಗಳಲ್ಲಿ ಬರಲಿರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವುದರೊಂದಿಗೆ ಸಿದ್ದತೆಯ ಜಾಗೃತಿಯನ್ನು ಮೂಡಿಸುವುದಾಗಿದೆ. ಎಸ್.ಐ.ಆರ್. ಮತಗಳ ಪರಿಷ್ಕರಣೆಯನ್ನು ಚುನಾವಣಾ ಆಯೋಗ ನಡೆಸಲಿದೆ ಮನೆಮನೆಗೆ ಭೇಟಿ ನೀಡುವ ಬಿ.ಎಲ್.ಎ.ಗಳು ಮತಪಟ್ಟಿಯಲ್ಲಿ ಹೆಸರುಗಳು ಕೈ ಬಿಟ್ಟು ಹೋಗದಂತೆ ಎಚ್ಚರವಹಿಸಿ ಪ್ರತಿಯೊಬ್ಬರಿಗೆ ಮತದಾನದ ಹಕ್ಕು ಇರುವಂತೆ ಜವಾಬ್ದಾರಿಯನ್ನು ವಹಿಸಲು ತರಭೇತಿಯನ್ನು ಪಡೆದು ಮತದಾರರನ್ನು ನೂಂದಾಯಿಸಲು ಕ್ರಮವಹಿಸ ಬೇಕಾಗಿದೆ. ಸಾರ್ವಜನಿಕರಲ್ಲಿ ಮತಪರಿಷ್ಕರಣೆಯಲ್ಲಿ ತಮ್ಮ ಹೆಸರನ್ನು ಮತಪಟ್ಟಿ ಇರುವಂತೆ ಪರಿಶೀಲಿಸುವ ಅರಿವು ಮೂಡಿಸಬೇಕಾಗಿದೆ ಎಂದರು.


ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿವಿಧಾನಸಭಾ ಕ್ಷೇತ್ರದಿಂದ ಕನಿಷ್ಟ ೧ ಸಾವಿರ ಮಂದಿಗೆ ಕಡಿಮೆ ಇಲ್ಲದಂತೆ ಕಾರ್ಯಕ್ರಮಕ್ಕೆ ಕರೆ ತರುವ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಶಾಸಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ವಹಿಸಿ ಕೊಳ್ಳ ಬೇಕಾಗಿದೆ. ಇದಕ್ಕೆ ಅಗತ್ಯವಾದ ಬಸ್ಸುಗಳು (೨೦) ಊಟ.ತಿಂಡಿ ವ್ಯವಸ್ಥೆಗಳನ್ನು ಶಾಸಕರು ಮಾಡಬೇಕು ಎಂದ ಅವರು ಕೋಲಾರ ಕ್ಷೇತ್ರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು. ಕೆ.ವೈ.ನಂಜೇಗೌಡರು, ಕೆ.ಜಿ.ಎಫ್. ರೂಪಕಲಾ ಶಶಿಧರ್, ಮತ್ತು ಶಾಸಕರು ಇಲ್ಲದ ಕಡೆ ಕಳೆದ ಚುನಾವಣೆಯಲ್ಲಿ ಸ್ವರ್ಧಿಸಿದ್ದ ಪರಾಜೀತರಾದ ಮುಳಬಾಗಿಲು ಆದಿನಾರಾಯಣ ಹಾಗೂ ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅಥವಾ ಮ್ಯಾಕಲ ನಾರಾಯಣಸ್ವಾಮಿರವರಿಗೆ ವಹಿಸಲಾಗುವುದು ಎಂದು ಹೇಳಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು ೧೦ ಸಾವಿರ ಮಂದಿಯನ್ನು ಕಾರ್ಯಕ್ರಮಕ್ಕೆ ಕರೆತರುವ ಜವಾಬ್ದಾರಿಯನ್ನು ವಹಿಸಿ ಕೊಂಡಿದ್ದಾರೆ. ಬಿ.ಕೆ.ಹರಿಪ್ರಸಾದ್ ಮತ್ತು ಕೆ.ಹೆಚ್.ಮುನಿಯಪ್ಪನವರು ಕಳೆದ ೨೦ ವರ್ಷಗಳಿಗಿಂತ ಹೆಚ್ಚು ಕಾಲದಿಂದ ಒಡನಾಟ ಹೊಂದಿರುವುದರಿಂದ ವಿಶೇಷ ಆಸಕ್ತಿ ಹೊಂದಿದ್ದಾರೆ ಎಂದ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೂರ್ವಭಾವಿ ಸಭೆಗಳು ನಡೆಯುತ್ತಿದೆ. ಒಟ್ಟಾರೆಯಾಗಿ ೩ ಕಾರ್ಯಕ್ರಮಗಳು ಜಂಟಿಯಾಗಿ ನಡೆಯುತ್ತಿರುವುದು ಐತಿಹಾಸಿಕವಾಗಿದೆ ಎಂದು ತಿಳಿಸಿದರು.