
ಯಾದಗಿರಿ : ಶಿರವಾಳ ಗ್ರಾಮದ ಹಾಲುಮತ ಸಮಾಜದ ಯುವಕ ಮಾಳು ಪೂಜಾರಿ ಅವರು ೧೦೦ ಕಿ.ಮೀ. ದೂರದ ಸವಾಲಿನ ಓಟವನ್ನು ೧೧ ಗಂಟೆ ೨೦ ನಿಮಿಷಗಳಲ್ಲಿ ಪೂರ್ಣಗೊಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಶಿರವಾಳ ಗ್ರಾಮದಿಂದ ಸುರಪುರದ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಸನ್ನಿಧಿಗೆ ತೆರಳಿ, ಅಲ್ಲಿಂದ ಮತ್ತೆ ಶಿರವಾಳ ಗ್ರಾಮಕ್ಕೆ ಮರಳುವ ಈ ಕಠಿಣ ಓಟದ ಸ್ಪರ್ಧೆಯಲ್ಲಿ ಮಾಳು ಪೂಜಾರಿ ಉತ್ಸಾಹದಿಂದ ಪಾಲ್ಗೊಂಡು ನಿಗದಿತ ದೂರವನ್ನು ಯಶಸ್ವಿಯಾಗಿ ಕ್ರಮಿಸಿದರು.
ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಯೋಜಕರು ?೩ ಲಕ್ಷ ಬಹುಮಾನ ಘೋಷಿಸಿ ಗೌರವಿಸಿದ್ದಾರೆ ಎಂದು ತಿಳಿದುಬಂದಿದೆ.
ದೈಹಿಕ ಸಾಮರ್ಥ್ಯ, ನಿರಂತರ ಅಭ್ಯಾಸ, ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪದಿAದ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮಾಳು ಪೂಜಾರಿ ಅವರ ಸಾಧನೆ ಶಿರವಾಳ ಗ್ರಾಮಕ್ಕೆ ಹೆಮ್ಮೆ ತಂದಿದೆ. ಯುವಜನರು ಕ್ರೀಡೆ ಹಾಗೂ ದೈಹಿಕ ಕ್ಷಮತೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಇಂತಹ ಸಾಧನೆಗಳು ಪ್ರೇರಣೆಯಾಗಿವೆ.
ಮಾಳು ಪೂಜಾರಿ ಅವರ ಸಾಧನೆಗೆ ಸಮಸ್ತ ಶಿರವಾಳ ಗ್ರಾಮದ ಜನತೆ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.





























