Home ಜಿಲ್ಲೆ ಜನಸಂಪರ್ಕ ಸಭೆಯಲ್ಲಿ ೧೫ ಅರ್ಜಿಗಳ ಸ್ವೀಕಾರ

ಜನಸಂಪರ್ಕ ಸಭೆಯಲ್ಲಿ ೧೫ ಅರ್ಜಿಗಳ ಸ್ವೀಕಾರ

ಸಂಜೆ ವಾಣಿ ವಾರ್ತೆ,
ಜಮಖಂಡಿ, ಜೂ.೧೧:ಜಮಖಂಡಿ ನಗರದ ತಾಲೂಕಾಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಬುಧವಾರ ಜನಸಂಪರ್ಕ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.
ಕರ್ನಾಟಕ ಲೋಕಾಯುಕ್ತ ನಿರ್ದೇಶನ ಮತ್ತು ಸುತ್ತೋಲೆಗಳ ಅನುಸಾರ ಪ್ರತಿ ತಿಂಗಳ ಎರಡನೇ ಬುಧವಾರ ಜನಸಂಪರ್ಕ ಸಭೆ ಆಯೋಜಿಸಲಾಗುತ್ತಿದ್ದು, ಅದರಂತೆ ಇಂದು ಜೂನ್ ೧೦ರಂದು ಜಮಖಂಡಿ ತಾಲೂಕು ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಸಾರ್ವಜನಿಕರಿಂದ ಸುಮಾರು ೧೫ ಅರ್ಜಿಗಳು ಸ್ವೀಕಾರವಾಗಿವೆ.
ಸ್ವೀಕರಿಸಲಾದ ಅರ್ಜಿಗಳಲ್ಲಿ ಎಡಿಎಲ್‌ಆರ್, ಸಿಡಬ್ಲ್ಯೂಸಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸಂಬAಧಿಸಿದ ದೂರುಗಳು ಸೇರಿದ್ದವು. ಅರ್ಜಿಗಳಲ್ಲಿರುವ ಅಂಶಗಳ ಕುರಿತು ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಂಡು ಅರ್ಜಿದಾರರಿಗೆ ನ್ಯಾಯ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಬಿ. ನಂದಗಾವಿ (ಐಪಿಎಸ್) ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರಿ ಇಲಾಖೆಯಲ್ಲಿ ಕೆಲಸ ಬಾಕಿ ಇಟ್ಟುಕೊಂಡು ಲಂಚ ಅಥವಾ ಭ್ರಷ್ಟಾಚಾರಕ್ಕೆ ಸಂಬAಧಿಸಿದ ಸಮಸ್ಯೆಗಳಿದ್ದರೆ ಸಾರ್ವಜನಿಕರು ನಿರ್ಭಯವಾಗಿ ಲೋಕಾಯುಕ್ತ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ವಿವಿಧ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಇಲಾಖೆಯ ಸಂಪರ್ಕ ಸಂಖ್ಯೆಗಳನ್ನು ಪ್ರದರ್ಶಿಸಲಾಗಿದ್ದು, ಸಾರ್ವಜನಿಕರು ಲೋಕಾಯುಕ್ತ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಭ್ರಷ್ಟಾಚಾರ ಸಂಬAಧಿತ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ನವನಗರ ಬಾಗಲಕೋಟೆಯ ಪೊಲೀಸ್ ಉಪಾಧೀಕ್ಷಕರಾದ ಸುರೇಶ್ ರೆಡ್ಡಿ ಎಂ.ಎಸ್., ಪೊಲೀಸ್ ನಿರೀಕ್ಷಕರಾದ ಎಂ.ಬಿ. ಬಿರಾದರ್ ಹಾಗೂ ಎನ್.ಆರ್. ಕಿಲಾರೆ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಮೋಹನ್ ಬಿಡಿಕರ, ತಹಶೀಲ್ದಾರ್ ಅನೀಲ ಕ. ಬಡಿಗೇರ್,ಸಿಪಿಐ ಮಲ್ಲಪ್ಪಮಡ್ಡಿ, ಶಿರಸ್ತೇದಾರ ಶಶಿಧರ್ ಚಲವಾದಿ, ಬಿ.ಎಸ್. ಸಿಂಧೂರ, ಜಿ.ಎಸ್. ಹೊಸಕೇರಿ ಹಾಗೂ ಪ್ರವೀಣ ಕೋಣೆ ಉಪಸ್ಥಿತರಿದ್ದರು.