
ಕಲಬುರಗಿ: ಶ್ರೀ ಮಾದರ ಚೆನ್ನಯ್ಯ ಸೇವಾ ಸಮಿತಿ ಕರ್ನಾಟಕ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಡಾ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳ ಹುಟ್ಟು ಹಬ್ಬದ ಪ್ರಯುಕ್ತ ಇಂದು ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಪುತ್ಥಳಿಗೆ ವಿಧಾನ ಪರಿಷತ್ತು ಸದಸ್ಯ ಡಾ. ಬಿ.ಜಿ ಪಾಟೀಲ ಅವರು ಮಾಲಾರ್ಪಣೆ ಮಾಡಿ ಅನ್ನಸಂತರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ,ದಶರಥ್ ಕಲಗುರ್ತಿ, ಅಂಬಾರಾಯ ಬೆಳಕೋಟ, ರಾಜು ಕಟ್ಟಿಮನಿ, ಕೃಷ್ಣ ತಂಗಡಗಿ, ಬಂಡೇಶ ತಾರ್ಪೆಲ್, ಸಚಿನ್ ಕಟ್ಟಿಮನಿ, ಮನೋಹರ್ ಬೀರನೂರ್, ದಿನೇಶ್ ಡ್ಯಾನ್ಸರ್, ಪ್ರದೀಪ್ ಬ್ಯಾಚ್ನಾಕರ್, ಶರಣಾ ಅಮೃತ , ಮಹೇಶ್ ಮೂಲಿಮನಿ, ಶಿವಶಂಕರ್ ದೊಡ್ಮನಿ, ಸಂಜು ಕಟ್ಟಿಮನಿ, ದೇವರಾಜ್ ವಾಲಿಕರ್, ನಾಗೇಶ್ ರಾಜು ತೆಲಂಗಿ ಉಪಸ್ಥಿತರಿದ್ದರು.































