
ಬಾದಾಮಿ,ಜೂ.೩೦: ತಾಲೂಕಿನ ಯಂಕAಚಿ-ಮಣಿನಾಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಹೆಣ್ಣು ಮಕ್ಕಳ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್.ಪಿ.ವಿ. ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದ್ದು ೧೪ ವರ್ಷ ಮೇಲ್ಪಟ್ಟು ೧೫ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಸರ್ಕಾರದಿಂದ ಉಚಿತವಾಗಿ ಹಾಕಲಾಗುತ್ತಿದೆ ಎಲ್ಲಅರ್ಹ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದ ಮಲೇರಿಯಾ ಮೇಲ್ವಿಚಾರಕ ಎಂ.ಎಸ್.ಅAಗಡಿ ಮಾತನಾಡಿ ಮಲೇರಿಯಾ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವದರಿಂದ ಮಲೇರಿಯಾ ಹರಡುತ್ತದೆ ಇದು ಒಂದು ಮಾರಣಾಂತಿಕ ಕಾಯಿಲೆಯಾಗಿದೆ, ಇದರ ಸಾಮಾನ್ಯ ಲಕ್ಷಣಗಳೆಂದರೆ ಶೀತ ನಡುಕ, ತೀವ್ರ ಜ್ವರ, ವಿಪರೀತ ಬೇವುರುವದು, ತಲೆನೋವು, ಆಯಾಸ, ವಾಕರಿಕೆ ಹಾಗೂ ವಾಂತಿ ಬರುತ್ತದೆ ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು, ಇನ್ನೊರ್ವ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪೂರ ಮಾತನಾಡಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ನೀರು ನಿಲ್ಲದಂತೆ ಎಚ್ಛರಿಕೆ ವಹಿಸಿ, ನೀರು ಸಂಗ್ರಹಿಸುವ ತೊಟ್ಟೆಗಳನ್ನು ಮುಚ್ಛಳದಿಂದ ಭದ್ರವಾಗಿ ಮುಚ್ಚಿ &ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ವೈದ್ಯರ ಸಲಹೆಗಳನ್ನು ಜೋತೆಗೆ ಎಲ್ಲಾ ಮುನ್ನೆಚ್ಚರಿಕೆ ಸುರಕ್ಷತಾ ಕ್ರಮಗಳನ್ನು ಅನಸರಿಸಬೇಕು ಎಂದು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಶಾಲೆಯ ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಾ ವೈದ್ಯಾಧಿಕಾರಿಗಳ ನಡೆ ವಸತಿ ಶಾಲೆಗಳ ಕಡೆ ಎಂಬAತೆ ವೈದ್ಯಾಧಿಕಾರಿಗಳ ಜೊತೆ ಸಿಬ್ಬಂದಿಯವರೆಲ್ಲ ನಮ್ಮ ಶಾಲೆಗೆ ಆಗಮಿಸಿ ಮಕ್ಕಳಿಗೆ ಶಿಕ್ಷಕರಿಗೆ ಮಲೇರಿಯಾ, ಲಸಿಕೆ, ಅಸ್ತಮಾ, ಕು?À್ಠರೋಗ, ನಾಯಿಕಡಿತ, ಹಾವುಕಡಿತ, ಸ್ವಚ್ಛತೆ ಉತ್ತಮ ಆರೋಗ್ಯ ಇತ್ಯಾದಿಗಳ ಕುರಿತು ಸುಧೀರ್ಘ ವೇಳೆ ಅರಿವು ಮೂಡಿಸಿದರು ಅಲ್ಲದೇ ೧೫೦ ಮಕ್ಕಳಿಗೆ ತಿಳಿಸಿದ ಎಲ್ಲಾ ಆರೋಗ್ಯಕರ ವಿ?Àಯಗಳು ತಾಲೂಕಿನ ೧೫೦ ಗ್ರಾಮಳಿಗೆ ತಲುಪಿದಂತೆ ಇಂತಹ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ಮೇಲಿಂದ ಮೇಲೆ ಹಮ್ಮಿಕೊಳ್ಳಲು ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಚೇತನ ಕಿವುಡಜಾಡರ, ಶಬೀನಾ ಜಂಗಿ, ಆಶಾ ಕಾರ್ಯಕರ್ತೆ ಗುರಮ್ಮ, ಬಸಮ್ಮ ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶೈಲಾ ಪೂಜಾರ ಸ್ವಾಗತಿಸಿ ನಿರೂಪಿಸಿದರು. ಅನಿತಾ ಜಾಲಗೇರಿ ವಂದಿಸಿದರು.
























