
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದ ಕಾರ್ಯಕ್ರಮದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬನಶಂಕರಿ ವಾರ್ಡ್‌ನಿಂದ ಕಾಂಗ್ರೆಸ್ ಮುಖಂಡರಾದ ರಘುನಾಥ್ ನಾಯ್ಡು ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ್‍ಯಾಲಿಯ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಮುಖಂಡರಾದ ಚೇತನ್ ಗೌಡ ಬನಶಂಕರಿ ಬ್ಲಾಕ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದ ಉಮರ್ ಆಲಿ ಹಾಗೂ ಬನಶಂಕರಿ ಬ್ಲಾಕ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ದೌಲತ್ ಖಾನ್, ಹೊಸಕೆರೆಹಳ್ಳಿ ನವೀನ್ ಕುಮಾರ್, ಸಮಾಜ ಸೇವಕ ಸೈಯದ್ ಅಸೀಫ್ ಹಾಗೂ ಕಾರ್ತಿಕ್. ಮುನ್ನಫ್ ಖಾನ್. ಸಜಾದ್ ಅಹಮದ್ ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.


























