Home ಜಿಲ್ಲೆ ಬೆಂಗಳೂರು ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕೆಂಗೇರಿ, ಜೂ.೨೩ : ಈಸ್ಟ್ ವೆಸ್ಟ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಕಾಲೇಜ್ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.


ಯೋಗ ತರಬೇತಿದಾರ ಶಾಂತರಾಜ್,ಕಾಲೇಜು ಪ್ರಾಂಶುಪಾಲ ಡಾ. ನಾಗರಾಜ್ ಜಿ ಚೊಳ್ಳಿ, ಡೀನ್ ಡಾ. ಮುರಳಿಶಂಕರ್. ಆರ್, ನಿರ್ದೇಶಕರು ( ಪ್ರವೇಶಾತಿ ) ಡಾ. ಪುರುಷೋತ್ತಮ, ಹಾಗೂ ಆಯುರ್ ಆಶ್ರಮದ ಗುರುಗಳಾದ ಶ್ರೀ ಡಾ. ಸಂತೋಷ್ ಗುರೂಜಿ ಯಶವಂತಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಜಯರಾಮೇಗೌಡ, ಬ್ಯಾಡರಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ಭರತೇಶ ಎಂ. ಚನ್ನಪ್ಪ ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.