
ಮುನವಳ್ಳಿ,ಜೂ೨೩: ಪಟ್ಟಣದ ಸವ್ಯಸಾಚಿ ಗೆಳೆಯರ ಬಳಗದಿಂದ ೨೦೨೫-೨೬ ನೇ ಸಾಲಿನಲ್ಲಿ ಎಸ್.ಎಸ್.ಎಸ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಸೋಮಶೇಖರ ಮಠದ ಶ್ರೀ ಮುತುಘೇಂದ್ರ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಉತ್ತಮ ಸಂಗತಿ ಇದೆ ತರಹ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು ತಮ್ಮ ಗುರಿಗಳತ್ತ ಸಾಗಬೇಕು ಎಂದರು.
ಶಿಕ್ಷಣಾಧಿಕಾರಿ ಎ.ಎ.ಖಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಶೈಕ್ಷಣಿಕ ಅಡಿಪಾಯದ ಜತೆಗೆ ಸೂಕ್ತ ಪ್ರೋತ್ಸಾಹ ನೀಡುವುದು ಪ್ರಮುಖವಾಗಿದೆ ಸವ್ಯಸಾಚಿ ಗೆಳೆಯರ ಬಳಗ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವದರ ಮೂಲಕ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡುತ್ತಿರುವುದು ವಿಧ್ಯಾರ್ಥಿಗಳಿಗೆ ಮುಂದಿನ ಕಲಿಕೆಗೆ ಹುರುದುಂಬಿಸುವAತಾಗುತ್ತದೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲಕರು ಸಹ ಬಾಗವಹಿಸಬೇಕೆಂದರು.
ಬಳಗದ ಅಧ್ಯಕ್ಷ ಪಂಚಪ್ಪ ಅನಿಗೋಳ, ಸದಸ್ಯರುಗಳಾದ ಶಿಕ್ಷಕ ಸುದೀರ ವಾಗೇರಿ, ಸಿ.ಆರ್.ಸಿ ಎಮ್.ಎಮ್.ಮುರನಾಳ, ಪಾಂಡು ಹೊನ್ನಳ್ಳಿ, ಜಿ.ಎಸ್.ಚಿಪ್ಪಲಕಟ್ಟಿ, ಡಿ.ಎಸ್.ಬಡೀಗೆರ, ಸುರೇಶ ಜಾಧವ, ರಾಜು ಪಾಟೀಲ, ಉಮೇಶ ವಿರೂಪಯ್ಯನವರಮಠ, ಪ್ರಕಾಶ ರಂಗನ್ನವರ, ರೋಹಿತ ದೊಡಮನಿ, ರಾಜು ಪಾಟೀಲ, ಗಣಪತಿ ಕಳಸನ್ನವರ, ಶೇಖರ ನಲವಡೆ, ಪ್ರವೀಣ ಪಟೇಲ್, ಕುಮಾರ ಅಂಗಡಿ, ಹೂವಪ್ಪ ಭಜಂತ್ರಿ, ದುಂಡಯ್ಯ ಹಿರೇಮಠ, ನೀಲಮ್ಮ ಕಡಕೋಳ, ಶಿವಲೀಲಾ ಕಮತಗಿ, ಸುಮಾ ಯಲಿಗಾರ, ಇತರರು ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಧ್ಯಾರ್ಥಿಗಳಿಗೆ ಸನ್ಮಾನೀಸಿ ಗೌರವಿಸಿದರು.
ಕಲ್ಲಪ್ಪ ನಲವಡೆ ಸ್ವಾಗತಿಸಿದರು, ಶಿಕ್ಷಕ ನಾಗೇಶ ಹೊನ್ನಳ್ಳಿ ಕಾ.ನಿರೂಪಿಸಿದರು, ಶಿವಾಜಿ ಮಾನಿ ವಂದಿಸಿದರು.

























