
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.01- ನಗರದಲ್ಲಿರುವ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮಹಾ ಮನೆಯಲ್ಲಿ ಆರಂಭವಾದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾ.ನಗರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ಇಂದು ಚಾಲನೆ ನೀಡಿದರು.
ನಗರದ ರೋಟರಿ ಭವನದ ಹಿಂಭಾಗದಲ್ಲಿರುವ ಮಹಾಮನೆಯ ರಜತ ಮಹೋತ್ಸವದ ಆಚರಣೆ ಅಂಗವಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು, ಶುಭ ಕಾರ್ಯಗಳಿಗೆ ಶುದ್ದ ಕುಡಿಯುವ ನೀರು ನೀಡುವ ಜೊತೆಗೆ ಐದು ರೂ. ಕಾಯಿನ್ ಹಾಕಿದರೆ 20 ಲೀಟರ್ ನೀರು ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ನೌಕರರ ಸಂಘದವರು ಇಂದು ಉದ್ಗಾಟನೆ ಮಾಡಿಸಿದರು.
ಚಾ.ನಗರ ಶ್ರೀಗಳು ಮಾತನಾಡಿ, ಇದೊಂದು ಪವಿತ್ರ ಕಾರ್ಯವಾಗಿದ್ದು, ಮಹಾಮನೆ ಹಾಗೂ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘ ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಲುತ್ತಿದೆ. ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳು ಮಹಾಮನೆಯಲ್ಲಿ ನಡೆಯುತ್ತಿದೆ. ಅಂದು ಬಸವಣ್ಣನವರು ಅನುಭನ ಮಂಟಪವನ್ನು ಮಹಾಮನೆ ಎಂದು ಕರೆಂiÀiಲಾಗಿತ್ತು. ಆದೇ ಮಾದರಿಯಲ್ಲಿ ನೌಕರರು ಮಹಾಮನೆಯಲ್ಲಿ ಸಮಾಜ ಅಭಿವೃದ್ದಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮೂರು ಸಂಘಗಳ ಜಂಟಿ ಕ್ರೀಯಾ ಸಮಿತಿಯ ಅಧ್ಯಕ್ಷರಾದ ಬಸಪ್ಪ ಮಾತನಾಡಿ, ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿ, ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಕಲ್ಪಿಸಿಕೊಡುವ ಕಾರ್ಯಕ್ರಮವಾಗಿದೆ. ಬಸವ ಜಯಂತಿ ಹಾಗೂ ಸಿದ್ದಗಂಗಾಶ್ರೀಗಳ ಜಯಂತಿ ದಿನದಂದು ಸಾರ್ವಜನಿಕರಿಗೆ ಉಚಿತವಾಗಿ ನೀರು ಪೊರೈಸಲಾಗುತ್ತದೆ ಎಂದರು.
ಸಂಘ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಮಹಾಮನೆ ನಿಮ್ಮೆಲ್ಲರ ಸಹಕಾರದಿಂದ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ನೌಕರರ ಸಂಘದ ರಜತ ಮಹೋತ್ಸವವು ಬಹಳ ಅಚ್ಚುಕಟ್ಟಾಗಿ ನಡೆಯಿತು. ಸದಸ್ಯರು ನೀಡಿದ ವಂತಿಕೆ, ದಾನಿಗಳ ನೀಡಿದ ಹಣದಿಂದ ಸಮಾರಂಭದಲ್ಲಿ ಉಳಿದ ಹಣವನ್ನು ಶುದ್ದಕುಡಿಯುವ ನೀರಿ ಘಟಕ ನಿರ್ಮಾಣಕ್ಕೆ ವಿನಿಯೋಗಿಸಿಕೊಳ್ಳಲಾಗಿದೆ. ದಿನದ 24 ಗಂಟೆಯು ಸಹ ಶುದ್ದ ಕುಡಿಯುವ ನೀರು ಘಟಕದಲ್ಲಿ ದೊರೆಯುತ್ತದೆ. ಶುಭ ಸಮಾರಂಭಗಳಿಗೂ ಸಹ ಶುದ್ದ ಕುಡಿಯುವ ನೀರು ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮಸಮುದ್ರ ಮಠದ ಶ್ರೀ ಮಹದೇವಸ್ವಾಮೀಜಿ, ಹಿರಿಯರಾದ ಕೋಡಿಮೋಳೆ ರಾಜಶೇಖರ್, ಕೆಂಪನಪುರ ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂಡ್ಲಪುರ ನಂದೀಶ್, ಕ್ರಿಯಾ ಸಮಿತಿಯ ಕಾರ್ಯದರ್ಶಿ ಹೊನ್ನಪ್ಪ, ಶಿವಕುಮಾರಸ್ವಾಮಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಮಹದೇವಸ್ವಾಮಿ ಐಟಿಐ, ಮಹೇಶ್, ಕಾರ್ಯದರ್ಶಿ ಅರ್ಕಪ್ಪ, ಮಹದೇವಸ್ವಾಮಿಕೊತ್ತಲವಾಡಿ, ಬಸವರಾಜಪ್ಪ, ಮಲ್ಲಿಕಾರ್ಜುನ್, ನಾಗರಾಜು, ಬಸವೇಶ್ವರ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಕೆ.ಎಸ್. ಮಹದೇವಸ್ವಾಮಿ, ಎಸ್. ಗುರುಸ್ವಾಮಿ, ಎಚ್.ಎಂ. ಗುರುಸ್ವಾಮಿ, ಶಶಿಧರ್, ಡಿ.ಎನ್. ಮಹದೇವಪ್ಪ, ಸಂಗಮ ಗೃಹ ನಿರ್ಮಾಣ ಸಹಕಾರ ಸಂಘದ ಉಪಾಧ್ಯಕ್ಷ ಸುಂದರ್, ಆರ್.ಎಸ್. ಲಿಂಗರಾಜು, ಮ್ಯಾನೇಜರ್ ಕಾಂತರಾಜು ಮೊದಲಾದವರು ಇದ್ದರು.

































