
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜೂ.01:- ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರ ಸೇವಾ ನಿವೃತ್ತಿ ಬದುಕು ನೆಮ್ಮದಿಯಾಗಿ ಇರಬೇಕೆಂದು ಕೆ.ಆರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಹೇಳಿದರು
ತಾಲೂಕಿನ ದಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 31 ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾದ ಮುಖ್ಯಶಿಕ್ಷಕ ಎ.ಶಿವನಂದ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಬೀಳ್ಕೊಂಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕ ಶಿವನಂದ್ ಸ್ನೇಹಜೀವಿ, ಸಮಯ ಪಾಲನೆ ಮತ್ತು ಸರಳತೆಯ ವ್ಯಕ್ತಿತ್ವದಿಂದಲೇ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದು ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗಣೇಶ್ ಮತ್ತು ನೇತೃತ್ವವನ್ನು ಗ್ರಾ.ಪಂ.ಸದಸ್ಯ ಸ್ವಾಮಿ ವಹಿಸಿ ನಿವೃತ್ತಿಯಾದ ಎ.ಶಿವನಂದ್ ಅವರ ಸೇವೆಯನ್ನು ಸ್ಮರಿಸಿ ನಿವೃತ್ತಿ ಜೀವನ ಶುಖಕರವಾಗಿರಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷೆ ಜ್ಯೋತಿಬಸವರಾಜು, ಬಿ.ಆರ್.ಸಿ.ವೆಂಕಟೇಶ್, ಇ.ಸಿ.ಓಗಳಾದ ದಾಸಪ್ಪ, ಜನಾರ್ಧನ್, ಸಿ.ಆರ್.ಪಿಗಳಾದ ನಂದಿನಿ, ಮುಖ್ಯಶಿಕ್ಷರಾದ ರುದ್ರೇಗೌಡ, ಮೂರ್ತಿ,ರವಿಕುಮಾರ್, ಹಳಿಯೂರು ದೇವೆಂದ್ರ, ಶಿಕ್ಷಕರಾದ ದೊಡ್ಡಕೊಪ್ಪಲು ಡಿ.ಟಿ.ಕುಮಾರ್, ಚಿಕ್ಕಕೊಪ್ಪಲು ಪುಟ್ಟಸ್ವಾಮೀಗೌಡ, ಎ.ಟಿ.ಅನಂತ್, ದಮ್ಮನಹಳ್ಳಿ ಶಾಲೆಯ ಮೋನೇಶ್ ಅಚಾರ್, ಎನ್.ಎಸ್.ಜಗದೀಶ್, ನಿವೃತ್ತ ಶಿಕ್ಷಕರಾದ ಟಿ.ಪುರಷೋತ್ತಮ್, ಸಿ.ಎನ್.ಕಾಳೇಗೌಡ,ದಿಡ್ಡಹಳ್ಳಿ ಕೃಷ್ಣೇಗೌಡ, ಬಿ.ಅರ್.ಸಿ.ಕಚೇರಿಯ ಮಂಜು ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಶೋಭಾ ಸೇರಿದಂತೆ ಮತ್ತಿತರರು ಹಾಜರಿದ್ದರು.

































