Home Uncategorized ಶಾಲೆ ವಿಲೀನಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ

ಶಾಲೆ ವಿಲೀನಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ

ಸಂಜೆವಾಣಿ ವಾರ್ತೆ

ಬಳ್ಳಾರಿ,,ಮೇ,10-  ಜಿಲ್ಲೆಯ ಹೊಸ ಯರಗುಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುವುದನ್ನು ವಿರೋಧಿಸಿ ಇಂದು ಂIಆSಔ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದ ಅಡಿಯಲ್ಲಿ ಗ್ರಾಮಸ್ಥರು  ಪ್ರತಿಭಟನೆ ಮಾಡಿ, ಇಡೀ ಊರೆಲ್ಲಾ ಮೆರವಣಿಗೆ ಮಾಡಿ, ಶಾಲೆ ಉಳಿವಿನ ಬಗ್ಗೆ ವಿಷಯ ಇರುವ ಬ್ಯಾನರ್ ಅನ್ನು ಶಾಲೆ ಮುಂದೆ  ಕಟ್ಟಿ, ಶಾಲೆಯ ಮುಖ್ಯ ಶಿಕ್ಷಕರ ಮೂಲಕ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಶಾಲೆ ಮುಚ್ಚಿದಲ್ಲಿ ನೂರಾರು ತಳ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಾರೆ, ಕೆ ಪಿ ಎಸ್ ಮ್ಯಾಗ್ನೆಟ್ ಯೋಜನೆಯು ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ಹೊಂದಿರುವ ಯೋಜನೆಯಾಗಿದೆ, ಇದರ ವಿರುದ್ಧ ನಮ್ಮ ಹೋರಾಟವಾಗಿದೆ. ಸರ್ಕಾರ ಜನರ ತೀವ್ರ ವಿರೋಧದ ನಡುವೆಯೂ ಈ ಯೋಜನೆ ಅನುಷ್ಠಾನಕ್ಕೆ ತಂದು, ಬಡವರ ಮಕ್ಕಳ ಶಾಲೆ ಮುಚ್ಚಲು ಮುಂದಾಗಿದೆ.  ಹೊಸ ಯರಗುಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆ ಮುಚ್ಚುವುದು ಹೀನ ಕೃತ್ಯವಾಗಿದೆ. ಈ ಶಾಲೆಗೆ ಅಗತ್ಯ  ಕಟ್ಟಡ ಸಂಖ್ಯೆ ಹೆಚ್ಚಿಸಿ, ಶಿಕ್ಷಕರ ನೇಮಕ ಮಾಡಿ, ಉತ್ತಮ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು. ಇದನ್ನು ಮೀರಿ ಈ ಶಾಲೆ ಯನ್ನು ಕೆ ಪಿ ಎಸ್ ಶಾಲೆಗೆ ವಿಲೀನ ಮಾಡಿದ್ದಲ್ಲಿ ಜನಸಾಮಾನ್ಯರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು.

ಈ ಸಂದರ್ಭದಲ್ಲಿ  ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಗುರಳ್ಳಿ ರಾಜ, ಕಾರ್ಮಿಕ ಮುಖಂಡರಾದ ಘನ ಮಲ್ಲಿ, ಊರಿನ ಮುಖಂಡರಾದ ಸುಂಕಣ್ಣ, ವೀರೇಶ್, ಶಿವಶಂಕರ್, m. ವೀರೇಶ್, ಸಿದ್ದಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.