Home ಜಿಲ್ಲೆ ಮೈಸೂರು ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.03-
ನಗರಸಭೆಯ ಕಚೇರಿಯಲ್ಲಿ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನಗರಸಭೆ ಅಧಿಕಾರಿಗಳನ್ನು ಹಾಗೂ ಮಧ್ಯವರ್ತಿ ಅಬೀಬ್ ಎಂಬುವರನ್ನು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣದ ಸಮೇತ ಬಂಧಿಸಿರುವ ಘಟನೆ ಇಂದು ಸಾಯಂಕಾಲ ನಡೆದಿದೆ.
ಚಾ.ನಗರ ನಗರಸಭೆಯ ಕಂದಾಯ ನಿರೀಕ್ಷಕ ಶಕೀಲ್ ಅಹಮದ್, ಕಂದಾಯ ಅಧಿಕಾರಿ ಹೇಮಕುಮಾರ್ ಉಪ್ಪಾರ ಬೀದಿಯ ಮೀಸೆ ನಾಗರಾಜು ಎಂಬುವರ ನಿವೇಶನವನ್ನು ಇ ಖಾತೆ ಮಾಡಿಕೊಡಲು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಪಡೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಲೋಹಿತ್ ಕುಮಾರ್, ಸುಧಾಕರ್ ಹಾಗು ಸಿಬ್ಬಂದಿ ವರ್ಗದವರು ದಾಳಿ ಮಾಡಿದ್ದರು.


ದೂರುದಾರ ಮೀಸೆ ನಾಗರಾಜು ಅವರಿಂದ ದೂರು ಪಡೆದು ಲೋಕಾಯುಕ್ತ ಪೊಲೀಸರು ಈ ಇಬ್ಬರು ಅಧಿಕಾರಿಗಳು ಮಧ್ಯವರ್ತಿ ಅಬೀಬ್ ಮೂಲಕ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಚೇರಿಗೆ ದಾಳಿ ಮಾಡಿ, ಹಣ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.
ದಾಳಿಯ ವೇಳೆಯಲ್ಲಿ ಲೋಕಾಯುಕ್ತ ಹೆಡ್‍ಕಾನ್ಸ್‍ಟೇಬಲ್ ಮಹಾಲಿಂಗಸ್ವಾಮಿ, ಕುಮಾರಾರಾಧ್ಯ, ನಾಗರಾಜು, ಮನೋರಂಜನ್, ಮಹದೇವಸ್ವಾಮಿ, ಗುರುಪ್ರಸಾದ್,, ಗೌತಮ್, ಶಾಂತರಾಜು, ಇಷಾಕ್ ಷರೀಫ್ ಇತರ ಸಿಬ್ಬಂದಿಗಳು ಇದ್ದರು.