
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ.20- ಆಕಸ್ಮಿಕ ಎನ್ನುವಂತೆ ಇಂದು ಬೆಳಗಿನ ಜಾವ ನಗರದಲ್ಲಿ ಮಳೆಯಾಗಿದೆ. ಆದರೂ ಇದಷ್ಟೇ ಸಾಲದು. ಈ ವರಗೆ ಮಳೆ ಬಾರದೆ ರೈತರು ಕಂಗಾಲಾಗಿದ್ದರು. ಬ೮ತ್ತಿದ ಬೆಳೆಗಳು ಮಳೆಗಾಗಿ ಕಾತರಿಸುತ್ತಿದ್ದವು. ಇದಕ್ಕಾಗಿ ಮಳೆ ಎಲ್ಲರಿಗೂ ಬೆಕಾದುದು. ಹಿಂದುಗಳು ಮಳೆಗಾಗಿ ದೇವಸ್ಥಾನಗಳಲ್ಲಿ ಭಜನೆ, ತನುಕೊಡ, ಕುಂಭಾಭಿಷೇಕ, ಪೂಜೆ ಮೊದಲಾದವುಗಳನ್ನು ಕೈಗೊಂಡಂತೆ. ಮಳೆಗಾಗಿ ಇಂದು ನಗರದ ಸುನ್ನಿ ಈದ್ಗಾ ಮೈದಾನದಲ್ಲಿ ಮುಸ್ಲೀಂ ಜನತೆ ವಿಶೇಷ ಪ್ರಾರ್ಥನೆ ಸಲ್ಲ೮ಸಿದರು.
ಮುಸ್ಲಿಂ ಧರ್ಮಗುರು ಖಾಜಿ ಗುಲಾಂ ಸಿದ್ದಿಕಿ ನೇತೃತ್ವದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಮಳೆ ನೀರಿನ ಮಹತ್ವ, ಪ್ರಕೃತಿ ಸಂಪತ್ತಿನ ಸಂರಕ್ಷಣೆಯ ಕುರಿತು ಗುರುಗಳು ಸಂದೇಶ ನೀಡಿದರು.
ಆ ದೇವರು ಅಲ್ಲಾಃ ಉತ್ತಮ ಮಳೆ ನೀಡಿ ನಾಡು ಸಮೃದ್ಧವಾಗಲಿ, ರೈತರು ಹಾಗೂ ಜನಸಾಮಾನ್ಯರು ಬದುಕು ಸಂಕಷ್ಟದಿಂದ ದೂರಾಗಲಿ ಎಂದು ಪ್ರಾರ್ಥಿಸಿದರು.





























