
ಸಂಜೆವಾಣಿ ವಾರ್ತೆ
ಕೆ ಆರ್ ನಗರ,ಜು.14:- ತಾಲೂಕಿನ ಮಳಲಿ ಗ್ರಾಮವು ಅವ್ಯವಸ್ಥೆಯ ಆಗರ ತಾಣವಾಗಿದ್ದು ಕುಡಿಯುವ ನೀರಿಗೆ ಆಹಾಕಾರ ಮತ್ತು ಸ್ವಚ್ಚತೆಯು ಸಂಪೂರ್ಣ ಮರಿಚೀಕೆ ಗ್ರಾಮಸ್ಥರಿಂದ ದೂರಿ ಸುರಿಮಳೆ.
ಕೆ.ಆರ್.ನಗರ ತಾಲೂಕಿನ ಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಲಿ ಗ್ರಾಮದಲ್ಲಿ ಕುಡಿಯುವ ನೀರಿನ ಆಹಾಕಾರ ಒದಗಿದ್ದು ಗ್ರಾಮದ ಹೃದಯ ಭಾಗದಲ್ಲಿರುವ ಬೋರ್ ವೆಲ್ ಕೆಟ್ಟು ಹೋಗಿ 10 ದಿನ ಕಳೆದಿದ್ದು ದೂರು ನೀಡಿದರು ಯಾವುದೇ ಫಲಕಾರಿ ಯಾಗಿಲ್ಲ ಆದರೆ ಬೋರ್ ವೇಲ್ ಮುರಿದ ಸ್ಥಿತಿಯಲ್ಲೆ ದುರಸ್ತಿಯಾಗದೆ ಎದ್ದುಕಾಣುತ್ತಿದೆ ಹಾಗೂ ಬೋರ್ ವೇಲ್ ಮುಂಭಾಗದ ಚರಂಡಿ ಹಾಗೂ ಸಮೀಪದಲ್ಲಿರುವ ಅಂಗನವಾಡಿ ಪಕ್ಕದ ಚರಂಡಿ ಗೊಬ್ಬುನಾರುತಿದು ಕಸಗಳ ರಾಶಿ ರಾಶಿ ಚರಂಡಿಯಲ್ಲಿದ್ದು ದಿನನಿತ್ಯದ ಅಂಗನವಾಡಿ ಕೇಂದ್ರ ಕ್ಕೆ ಬರುವ ಪುಟ್ಟ ಕಂದಮ್ಮಗಳ ಆರೋಗ್ಯದಲ್ಲಿ ಏರುಪೇರು ಉಂಟಾದಲ್ಲಿ ಇದಕ್ಕೆ ಯಾರು ಹೊಣೆ ಎಂಬ ಯಕ್ಷಪ್ರಶ್ನೆಯಾಗಿದೆ ಎಂದು ಗ್ರಾಮಾಸ್ಥರು ಆರೋಪಿಸಿದರು.
ಕಳೆದ 10 ದಿನ ಕಳೆದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಅಥವಾ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆಯ ಅಧಿಕಾರಿಗಳಾಗಲಿ ದುರಸ್ತಿಗೊಳಿಸಿಲ್ಲ ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮಸ್ಥರು ಆಕ್ರೋಶಭರಿತರಾಗಿದ್ದಾರೆ.
ಗ್ರಾಮದ ಸರಿ ಸುಮಾರು 50ರಿಂದ 60 ಕುಟುಂಬಗಳು ಈ ಬೋರ್ ವೆಲ್ ನೀರನ್ನೆ ಅವಲಂಬಿತರಾಗಿದ್ದು, ಈಗ ಕುಡಿಯಲು ನೀರು ತರಲು ಸರ್ಕಾರಿ ಶಾಲೆಯ ಬೋರ್ ವೆಲ್ ಹಾಗೂ ಬಸವೇಶ್ವರ ದೇವಸ್ಥಾನದ ಸಮೀಪ ಇರುವ ಬೋರ್ವೆಲ್ ಗಳಲ್ಲಿ ನೀರನ್ನು ಅಲ್ಲಿಂದ ಹರಸಹಾಸ ಪಡುವ ಸ್ಥಿತಿ ಉದ್ಭವವಾಗಿದೆ
ಸಂಬಂಧಪಟ್ಟ ಇಲಾಖೆಯವರು ಶೀಘ್ರದಲ್ಲಿ ಬೋರ್ ವೆಲ್ ಅನ್ನು ದುರಸ್ತಿ ಪಡಿಸದಿದ್ದಲ್ಲಿ ಮಾವತ್ತೂರು ಗ್ರಾಮ ಪಂಚಾಯಿತಿಯ ಎದುರು ಧರಣಿ ಕುರುವುದಾಗಿ ಎಚ್ಚರಿಸಿದ್ದಾರೆ.
ಗ್ರಾಮದ ಚರಂಡಿಗಳಲ್ಲಿ ಕಸದ ರಾಶಿಗಳು ತುಂಬಿರುವುದು ಸರ್ವೇ ಸಾಮಾನ್ಯವಾಗಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛಗೊಳಿಸಿ ಸುಮಾರು ದಿನಗಳೇ ಕಳೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಆದಷ್ಟು ಬೇಗ ಕ್ರಮವಹಿಸಿ ಗ್ರಾಮದಲ್ಲಾಗಿರುವ ಅನಾನುಕೂಲಗಳನ್ನು ಸರಿಪಡಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

































