Home ಜಿಲ್ಲೆ ಮಂಗಳೂರು ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ; ಸವಾರ ಮೃತ್ಯು

ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ; ಸವಾರ ಮೃತ್ಯು

ಉಡುಪಿ: ಮಣಿಪಾಲದಿಂದ ಮನೆಗೆ ತೆರಳುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಕೆಳಪರ್ಕಳ ಡೌನ್ ಬಳಿ ಸೋಮವಾರ ತಡರಾತ್ರಿ ನಡೆದಿದೆ.ಮೃತರನ್ನು ಸನತ್ ಎಂದು ಗುರುತಿಸಲಾಗಿದೆ.
ಸನತ್ ಅವರು ಸ್ನೇಹಿತರಾದ ಸಂತ್ರ ಹಾಗೂ ಆಶಿಶ್ ಅವರೊಂದಿಗೆ ಮಣಿಪಾಲಕ್ಕೆ ಬಂದಿದ್ದರು. ಊಟ ಮುಗಿಸಿ ರಾತ್ರಿ ಸುಮಾರು ೧.೨೫ಕ್ಕೆ ಮೂವರು ಮನೆಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಸನತ್ ಅವರು ಬುಲೆಟ್ ಬೈಕ್ (ಏಂ-೨೦-ಇP-೫೯೩೪) ಚಲಾಯಿಸಿಕೊಂಡು ಮುಂದೆ ಸಾಗಿದ್ದರು. ಇತರ ಇಬ್ಬರು ಸ್ನೇಹಿತರು ಮತ್ತೊಂದು ಬೈಕ್‌ನಲ್ಲಿ ಅವರ ಹಿಂದಿನಿಂದ ಬರುತ್ತಿದ್ದರು.
ಮಣಿಪಾಲ?ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ಹೆರ್ಗ ಗ್ರಾಮದ ಕೆಳಪರ್ಕಳ ಡೌನ್ ಬಳಿ ತಲುಪಿದಾಗ ಸನತ್ ಅವರು ಬೈಕ್‌ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಅವರು ಬೈಕ್ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು.
ಅಪಘಾತ ಗಮನಿಸಿದ ಸ್ನೇಹಿತರು ಹಾಗೂ ಸ್ಥಳೀಯರು ಸನತ್ ಅವರನ್ನು ಚರಂಡಿಯಿಂದ ಮೇಲಕ್ಕೆತ್ತಿ ತಕ್ಷಣ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ತಿಳಿದುಬಂದಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.