
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.19: ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ ಮತ್ತು ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮಗಳಲ್ಲಿ ಐ ಕೆ ಕೆ ಎಂ ಎಸ್ (ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ) ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ . ಇದೆ ತಿಂಗಳ 20 ರಂದು ನಡೆಯುವ ಹೋರಾಟ ಕುರಿತು ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಗೋವಿಂದ್ ಅವರು ಮಾತನಾಡುತ್ತಾ ಸೋಮವಾರ ಬೆಳಗ್ಗೆ 10.30 ಕ್ಕೆ ಬಳ್ಳಾರಿ ನಗರದ
ಜಿಲ್ಲಾಧಿಕಾರಿ ಕಚೇರಿ ಬಳಿ ರೈತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕವನ್ನು ಬರಗಾಲ ಪೀಡಿತ ರಾಜ್ಯ ಎಂದು ಘೋಷಿಸಬೇಕು, . ರೈತರ ಸಂಪೂರ್ಣ ಸಾಲ ಮನ್ನಾ ಮಾಡಿಬೇಕು, ರೈತರಿಗೆ ಬೆಳೆ ನಷ್ಟಕ್ಕೆ ಒಂದು ಎಕರೆಗೆ 50,000 ಪರಿಹಾರ ನೀಡಬೇಕು, ವರ್ಷಪೂರ್ತಿ ಹಳ್ಳಿಗಳಲ್ಲಿ ಕೂಲಿ ಕೆಲಸ ಸಿಗುವಂತೆ ವ್ಯವಸ್ಥೆ ನಿರ್ಮಿಸಬೇಕು, ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಹಲವಾರು ಬೇಡಿಕೆಗಳ ಹಿಡೇರಿಕೆಗಾಗಿ ಆಗ್ರಹಿಸಿ ದಿನಾಂಕ ಜುಲೈ 20 ರಂದು ಸೋಮವಾರ ಬೆಳಿಗ್ಗೆ 10:30 ಕ್ಕೆ ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಜಿಲ್ಲೆಯ 5 ತಾಲ್ಲೂಕಿನ ರೈತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ರೈತರಿಗೆ ಕರೆ ನೀಡಲಾಯಿತು.
ಹೋರಾಟದಲ್ಲಿ ಭಾಗವಹಿಸಲು 9972690319/9742994490 ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಹನುಮಂತಪ್ಪ, ಬಸಣ್ಣ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಪಂಪಾಪತಿ, ಭೀಮ, ಬಸವರಾಜ್, ಶಂಕ್ರಪ್ಪ ಆಶೋಕ ಗಿರಿಮಲ್ಲ ರಾಮಣ್ಣ ಮೇಘರಾಜ್ ಕಪ್ಪಗಲ್ ರಾಜೇಶ್ ಇನ್ನಿತರರು ಭಾಗವಹಿಸಿದ್ದರು.































