Home ಜಿಲ್ಲೆ ಬಣ್ಣದ ಅಂಗಡಿ ಮಾಲೀಕನ ವಂಚಿಸಿ 28 ಲಕ್ಷ ಮಾಲು ಕದ್ದ ಕೆಲಸಗಾರನ ಬಂಧನ

ಬಣ್ಣದ ಅಂಗಡಿ ಮಾಲೀಕನ ವಂಚಿಸಿ 28 ಲಕ್ಷ ಮಾಲು ಕದ್ದ ಕೆಲಸಗಾರನ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.19: ನಗರದ ಬಣ್ಣದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿಯೋರ್ವ ಅಂಗಡಿ ಮಾಲೀಕನಿಗೇ ಮೋಸ ಮಾಡುತ್ತ. ಅಂಗಡಿಯಲ್ಲಿನ ನಗದು, ಗೋಡೌನ್ ನಲ್ಲಿ ಬಣ್ಣದ ಮಾಲನ್ನು ಕದ್ದಿದ್ದ. ಇದನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಜೋಸೆಫ್, ಸಂತೋಷ್ ಕುಮಾರ್ ಕೆ. ಅವರ ಬಣ್ಣದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.ಇಲ್ಲಿನ ಶಾಸ್ತ್ರಿ ನಗರದ ಪೇಂಟ್ ಗೋಡೌನಿಂದ ಡುಲೆಕ್ಸ್ ಕಂಪನಿಯ ಸುಮಾರು 27,79,350 ಮೌಲ್ಯದ ಪೆಂಟ್ ಡಜ್ಜೆಗಳು ಕಳೆದ 2025 ರ ನವೆಂಬರ್ 1 ರಿಂದ 2026 ರ ಜೂನ್ 25 ರೊಳಗೆ ಕದ್ದು ಸಾಗಿಸಿದ್ದ.

ಗೋಡೌನ್ ನಲ್ಲಿ ಮಾಲಿನಕೊರತೆ ಕಂಡು ಬ್ರೂಸ್ ಪೇಟೆ ಪೊಲೀಸರಿಗೆ ದೂರು ನೀಡಿದ ಮಾಲೀಕ ಸಂತೋಷ್ ಕುಮಾರ್.

ಪೊಲೀಸರು ತನಿಖೆ ಮಾಡಿದಾಗ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜೋಸೆಫ್ (23) ಪೆಂಟ್ ಡಟ್ಟೆಗಳನ್ನು ಕಳ್ಳತನ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, 12.21 ಲಕ್ಷ ರೂ ಮೌಲ್ಯದ 279 ಬಣ್ಣದ ಡಬ್ಬೆಗಳನ್ನು ಹಾಗೂ 3.06 ಲಕ್ಷ ರೂ ನಗದು ಹಣವನ್ನು ಆರೋಪಿಯಿಂದ ಜಪ್ತು ಮಾಡಿ. ಆರೋಪಿಯನ್ನು ಜೈಲಿಗೆ ಕಳಿಸಲಾಗಿದೆಂದು ಎಸ್ಪಿ ಸುಮನ್ ಪನ್ನೇಕರ್ ನಿನ್ನೆ ಸಂಜೆ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.