
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.19: ನವವಿವಾಹಿತ ಯುವಕನನ್ನು ಕಳೆದ ಮೂರು ದಿನಗಳ ಹಿಂದೆ ನಗರದ ಬಂಡಿಹಟ್ಟಿ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಕೈಗಳನ್ಬು ಪೊಲೀಸರು ಪತ್ತೆಹಚ್ಚಿದ್ದು. ಮೂವರನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಲ್ಲಿದ್ದಾನೆ.
ನಗರದ 29ನೇ ವಾರ್ಡ್ನ ಬಂಡಿಹಟ್ಟಿ ಪ್ರದೇಶದ ಸಮತಾ ನಗರದ ನಬಿ ರಸೂಲ್ (21) ನನ್ನು ಆತನ ವಿವಾಹದ ಆರತಕ್ಷತೆ ಬಳಿಕ ರಾತ್ರಿ ಪಾರ್ಟಿ ಮಾಡುವಾಗ ಬಟ್ಟಿ ಪ್ರದೇಶದಲ್ಲಿ ಕೊಲೆ ಮಾಡಲಾಗಿತ್ತು.
ಕಳೆದ 15 ದಿನಗಳ ಹಿಂದೆ ಈತ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು ಪ್ರೀತಿಸಿ ಹೊರಗೆ ಕರೆದುಕೊಂಡು ಹೋಗಿ. ಬಳಿಕ ಇಬ್ಬರೂ ಮನೆಗೆ ಮರಳಿ ಬಂದು ಕುಟುಂಬದವರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು
ತನ್ನ ಮದುವೆ ನಡೆದಿದ್ದರಿಂದ ಸ್ನೇಹಿತರಿಗೆ ಪಾರ್ಟಿ ಕೊಡಲು ಭಟ್ಟಿ ಪ್ರದೇಶದಲ್ಲಿ ಸೇರಿಕೊಂಡಿದ್ದರು. ಮದ್ಯಪಾನದೊಂದಿಗೆ ಪಾರ್ಟಿ ಮಾಡುವ ವೇಳೆ ಬಾಲಕ ಮತ್ತು ರಸೂಲ್ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋಗಿ, ಆ ಬಾಲಕ ಚಾಕುವಿನಿಂದ ನಬಿ ರಸೂಲ್ ನನ್ನು ಕೊಲೆ ಮಾಡಿದ್ದಾನೆ ಬಾಲಕನೇ ಕೊಲೆಯ ಪ್ರಮುಖ ಆರೋಪಿ.
ಬಾಲಕನಿಗೆ ಆತನ ಸ್ನೇಹಿತರಾದ ತಾಹೀರ್, ಸಲ್ಮಾನ್ ಹಾಗೂ ಸಮೀರ್ ಸಹಕರಿಸಿದ್ದಾರಂತೆ.
ಪೊಲೀಸರು ಈಗ ಬಾಲಕ, ತಾಹೀರಾ ಅಲಿಯಾಸ್ ಹೀನಾ ಹಾಗೂ ಸಮೀರ್ ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದು ಮತ್ತೊಬ್ಬ ಆರೋಪಿ ಸಲ್ಮಾನ್ ಪರಾರಿಯಾಗಿದ್ದಾನೆ ಎಂದು ಎಸ್ಪಿ ಸುಮನ್ ಪನ್ನೆಕರ್ ಹೇಳಿದ್ದಾರೆ.































