
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.19 ನೀಟ್ ಪರೀಕ್ಷೆ ಹಗರಣಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲು ಹಾಗೂ ನೀಟ್ ಪರೀಕ್ಷೆಗಳಿಂದ ವಂಚಿತರಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 20 ದಿನಗಳಿಂದ
ಅಮರಣಾಂತ ಉಪವಾಸ ಸತ್ಯಾಗೃಹ ನೆಡೆಸುತ್ತಿರುವ ಪರಿಸರವಾದಿ ಸೋನಮ್ ಅವರನ್ನು ಬೆಂಬಲಿಸಿ ಸೌಹಾರ್ದ ಕರ್ನಾಟಕ ವೇದಿಕೆ ತಾಲೂಕು ಸಮಿತಿಯಿಂದ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಸಂಚಾಲಕರಾದ ಬಿ.ಮಾಳಮ್ಮ ಮಾತನಾಡಿ ಕೇಂದ್ರ ಸರ್ಕಾರ ಅವರು ಜೊತೆ ಮಾತುಕತೆ ನೆಡೆಸದೆ ನಿರ್ಲಕ್ಷ್ಯವಹಿಸಿರಿವುದು ಅಕ್ಷಮ್ಯವಾಗಿದೆ.ಸೋನಮ್ ವಾಂಗ್ಚುಕ್ ಆರೋಗ್ಯವು ದಿನ ದಿನಕ್ಕೆ ಕ್ಷೀಣಿಸುತ್ತಿದೆ.ಉಪವಾಸ ಸತ್ಯಾಗ್ರಹ ಒಂದು ಪ್ರಜಾಸತ್ತಾತ್ಮಕ ಪ್ರತಿರೋಧವಾಗಿದೆ.ಕೇಂದ್ರ ಸರ್ಕಾರವು ಕೂಡಲೇ ಸ್ಪಂದಿಸಬೇಕಾದ್ದು ಪ್ರಜಾಸತ್ತಾತ್ಮಕ ಜವಾಬ್ದಾರಿಯಾಗಿದೆ.ಕನಿಷ್ಟ ಮಾನವಿಯತೆಯು ಇಲ್ಲದ ಸರ್ಕಾರವಾಗಿದೆ.ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಲಾಗಿದೆ.ಕಡೇ ಪಕ್ಷ ಮಾತುಕತೆಗೆ ಮುಂದಾಗಿ ಶ್ರೀ ಸೋನಮ್ ವಾಗ್ಚೂಕ್ಅವರ ಜೀವಕ್ಕೆ ಅಪಾಯವಾಗದಂತೆ ನೋಡಿ ಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಕೂಡವಾಗಿದೆ.ದೆಹಲಿಯ ಹೈಕೋರ್ಟ್ ಶ್ರೀ ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಮೇಲೆನಿಗಾ ಇಟ್ಟಿರಬೇಕೇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆಸೂಚನೆ ನೀಡಲಾಗಿದೆ. ಸೋನಮ್ ವಾಂಗ್ ಚುಕ್ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪವಾಸ ಮಾಡುತ್ತಿಲ್ಲ.ಅಸಂಖ್ಯಾತ ವಿದ್ಯಾರ್ಥಿಗಳ ಮಾನಸಿಕ ತಲ್ಲಣಗಳ ಪ್ರತಿನಿಧಿಯಾಗಿ ಉಪವಾಸ ಸತ್ಯಾ ಗೃಹ ನೆಡೆಸುತ್ತಿದ್ದಾರೆ.ಕೂಡಲೇ ಕೇಂದ್ರ ಸರ್ಕಾರ ಮಧ್ಯ
ಪ್ರವೇಶ ಮಾಡಿ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಅಗತ್ಯವಾದ ಸಕಾರಾತ್ಮಕ ಕ್ರಮಗಳನ್ನು ತೆಗೆದು ಕೊಳ್ಳ ಬೇಕೇಂದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು.ಆರ್.ಎಸ್.ಬಸವರಾಜ್, ಜಗನ್ನಾಥ್, ಕೆ.ಗಾಳೆಪ್ಪ, ಕೆ.ರಮೇಶ್., ಎಸ್ ಎಫ್ ಐ ಜಯಸೂರ್ಯ, ಪಿ.ಚಾಂದಭೀ, ಸೈಯದ್ ಇರ್ಫಾನ್ ಹಾಗೂ ವಿದ್ಯಾರ್ಥಿಗಳು ಕಾಲೇಜ್ ವಿದ್ಯಾರ್ಥಿಗಳು
ಭಾಗವಹಿಸಿದ್ದರು.































