Home ಜಿಲ್ಲೆ ಮೈಸೂರು ಧಮ್ಮ ಪಯಣಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ

ಧಮ್ಮ ಪಯಣಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಅ.23 :
ಅಂತರರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಸಂಬಂಧ ಧಮ್ಮ ಪಯಣಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಮಾಲಾರ್ಪಣೆ ಮಾಡುವ ಮೂಲಕ ಧಮ್ಮ ಪಯಣದ ಜೊತೆ ತೆರಳಿದರು.
ಈ ವೇಳೆ ಮಾತನಾಡಿದ ಶಾಸಕರು, ಇದೇ ತಿಂಗಳ 24&25 ರಂದ ನಡೆಯುವ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದ ಕಾರ್ಯಕ್ರಮದ ಅಂಗವಾಗಿ ಇಂದು ಬೌದ್ಧ ಬಿಕ್ಕುಗಳು, ಉಪನ್ಯಾಕರು ಹಾಗೂ ವಿವಿಧ ಧರ್ಮಧ ಮುಖಂಡರು ಇತರರು ಧಮ್ಮ ಪಯಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅದೇ ರೀತಿ ಬೌದ್ಧ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಜನರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.


ನಂತರ ಅಂಬೇಡ್ಕರ್ ಪ್ರತಿಮೆಯಿಂದ ಶಾಸಕ ಎ.ಆರ್.ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಹೊರಟ ಕಾಲ್ನಡಿಗೆ ಪಯಣ ಡಾ.ಅಂಬೇಡ್ಕರ್ ರಸ್ತೆ, ಡಾ.ರಾಜಕುಮಾರ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಅಚ್ಗಾಲ್ ರಸ್ತೆ, ಬಾಪುನಗರ, ಮುಡಿಗುಂಡ, ಉತ್ತಂಬಳ್ಳಿ ಮೂಲಕ ಚಾ.ನಗರದ ಅಂಬೇಡ್ಕರ್ ಕ್ರೀಡಾಂಗಣದವರೆಗೆ ಸಾಗಿತು.
ಧಮ್ಮ ಪಯಣವನ್ನು ಅಲ್ಲಲ್ಲಿ ಗ್ರಾಮದ ಮುಖಂಡರು ಹಾರ ಸ್ವಾಗತ ಮಾಡಿದರು.


ಈ ಸಂಧರ್ಭದಲ್ಲಿ ಬೌದ್ಧ ಸಮ್ಮೇಳನ ಆಚರಣಾ ಸಮಿತಿ ಗೌರವಧ್ಯಕ್ಷ ಮನೋರಖಿತ ಬಂತೇಜಿ, ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋದ್ಧಿದತ್ತ ಬಂತೇಜಿ, ಸಂಘಪಾಲ ಬಂತೇಜಿ, ಗಣಪತಿ ದೇವಸ್ಥಾನದ ಅರ್ಚಕ ನಂದಕುಮಾರ್, ಸಮ್ಮೇಳನದ ಉಪಸಂಚಾಲಕ ಮುಳ್ಳೂರು ಶಿವಮಲ್ಲು, ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ, ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರು ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಮಾಜಿ ಅಧ್ಯಕ್ಷರು ರೇಖಾ, ರಮೇಶ್, ಬಸ್ತೀಪುರ ಶಾಂತರಾಜು, ಸೆಲ್ವರಾಜು, ಮಾಜಿ ಉಪಾಧ್ಯಕ್ಷರು ಸುರೇಶ್, ಹರ್ಷ, ಮಾಜಿ ಸದಸ್ಯರು ರಾಮಕೃಷ್ಣ, ರಾಘವೇಂದ್ರ, ನಾಗಣ್ಣ, ಧರಣೇಶ್, ಮಂಜುನಾಥ್, ಬೆಂಡರಹಳ್ಳಿ ಮಹೇಶ್, ಸುಮಾಸುಬ್ಬಣ್ಣ, ಕೃಷ್ಣವೇಣಿ, ಪ್ರಭುಸ್ವಾಮಿ, ಜಗದೀಶ್ ಶಂಕನಪುರ, ಚೇತನ್ ದೊರೆರಾಜ್, ನಾಗರಾಜು, ಮಾಂಬಳ್ಳಿ ಮುಜ್ಜು, ಅಂಬೇಡ್ಕರ್ ಸ್ಮಾರಕ ಸಂಘದ ಕಾರ್ಯದರ್ಶಿ ಪಾಪಣ್ಣ, ಸಿದ್ದಾರ್ಥ್, ಪಿ.ಕೃಷ್ಣರಾಜ್, ಮುಳ್ಳೂರು ಮಂಜುನಾಥ್, ಕುರುಬರ ಸಂಘದ ಅಧ್ಯಕ್ಷರು ನಂಜೇಗೌಡ, ನಿರ್ದೇಶಕ ಪರಶಿವ, ಚಿನ್ನಸ್ವಾಮಿ ಮಾಳಿಗೆ, ಇನಾಯತ್, ಹೇಮಂತ್, ಮುಳ್ಳೂರು ಕಮಲ್, ಬಸ್ತೀಪುರ ಪ್ರಕಾಶ್, ಸಿದ್ದಪ್ಪಾಜಿ, ದಿಲೀಪ್ ಹಾಗೂ ಇತರರು ಇದ್ದರು.