Home ಜಿಲ್ಲೆ ಮೈಸೂರು ತಗಡೂರಿನ ಗಾಂಧಿ ಗ್ರಾಮಕ್ಕೆ ಬೇಕಾಗಿದ್ದೆ ಕಾಯಕಲ್ಪ

ತಗಡೂರಿನ ಗಾಂಧಿ ಗ್ರಾಮಕ್ಕೆ ಬೇಕಾಗಿದ್ದೆ ಕಾಯಕಲ್ಪ

ಸಂಜೆವಾಣಿ ವಾರ್ತೆ
ನಂಜನಗೂಡು: ಜು.13:-
1933ರಲ್ಲಿ ಅರಂಭವಾದ ಮಹಾತ್ಮಾ ಗಾಂದಿಜಿಯವರು ದೇಶ ವ್ಯಾಪ್ತಿ ಪರ್ಯಟನೆ ಮಾಡುತ್ತಿದ್ದ ವೇಳೆಯಲ್ಲಿ.1934 ನೇ ಜನವರಿ 4 ರಂದು ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ತಗಡೂರು ರಾಮಚಂದ್ರ ರಾಯರು 1921 ರಲ್ಲಿ ತಾವು ಸ್ಥಾಪಿಸಿದ ಖಾದಿ ಗ್ರಾಮೋದ್ಯೋಗವನ್ನು ವೀಕ್ಷಿಸಲು ತಗಡೂರಿಗೆ ಬೇಟಿ ನೀಡುವಂತೆ, ಮನವಿ ಮೇರೆಗೆ ಗಾಂಧಿಯವರು.05-01-1934 ರಂದು ಮುಂಜಾನೆ 7:30ಕ್ಕೆ ತಗಡೂರಿಗೆ ಪಾದಾರ್ಪಣೆ ಮಾಡಿದರು, ಬೃಹದಾಕಾರದಲ್ಲಿ ಬೆಳೆದಿದ್ದ ಖಾದಿ ಗ್ರಾಮೋದ್ಯೋಗವನ್ನು, ಕಂಡು ಸಂತೋಷ ಗೊಂಡ ಗಾಂಧಿಜಿಯವರು ರಾಯರಿಗೆ ಬೆನ್ನು ತಟ್ಟಿ ಪ್ರಶಂಸಿದ್ದರು. ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವಂತೆ ಸೂಚಿಸಿದರು ಅಂತೆಯೇ ರಾಯರು ಖಾದಿ ಗ್ರಾಮೋದ್ಯೋಗವನ್ನು ವಿಸ್ತಾರಿಸುತ್ತಾರೆ.


ತಗಡೂರು ಖಾದಿ ಗ್ರಾಮೋದ್ಯೋಗ ಹತ್ತಾರು ಕುಟುಂಬಗಳಿಗೆ ದಾರಿ:
1921 ರಲ್ಲಿ ಸ್ದಾಪಿತವಾದ ಖಾದಿ ಗ್ರಾಮೋದ್ಯೋಗವು ತಗಡೂರಿನ ಹೃದಯ ಭಾಗದಲ್ಲಿ 1,1/2 ಎಕರೆಯಲ್ಲಿ ತಲೆ ಎತ್ತಿದ್ದು.ಹತ್ತಾರು ಕುಟುಂಬಗಳಿಗೆ ನೂರಾರು ಮಹಿಳೆಯರಿಗೆ ಆಶ್ರಯವಾಗಿತ್ತು. ಸುತ್ತಮುತ್ತಲಿನ ಅನೇಕ ಗ್ರಾಮಸ್ಥರಿಗೆ ದೇಶಭಕ್ತಿಯ ಜೊತೆಗೆ, ಜೀವನ ಸಾಗಿಸಲು ಆದಾಯದ ಮೂಲದ ಹಾಗೂ ಬದುಕು ಕಟ್ಟಿಕೊಡುವ ಚರಕವಾಗಿತ್ತು. ಇಂದಿಗೂ ಈ ನೂಲುವ ವೃತಿಯನ್ನು ನಂಬಿಕೊಂಡು ಹತ್ತಾರು ಕುಟುಂಬಗಳು ಜೀವನ ಸಾಗಿಸುತ್ತಿದೆ.


ಕಣ್ಣು ಮುಚ್ಚಿ ಕುಳಿತ ಸರ್ಕಾರ :
ರಾಷ್ಟ್ರಪಿತ ಮಹಾತ್ಮರು ತಗಡೂರು ಗ್ರಾಮಕ್ಕೆ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಕೊಠಡಿಯು ಇಂದು ಅನೈತಿಕ ಚಟುವಟಿಕೆ ಮತ್ತು ಹಾವು ಚೇಳುಗಳ ವಾಸಸ್ಥಾನವಾಗಿದೆ. ಮಂದಿರವು ಸಂಪೂರ್ಣ ಶಿತಲಗೊಂಡಿದ್ದು ಗೋಡೆಗಳು ಮೇಲ್ಚಾವಣಿ ಕುಸಿದು ಹಲವು ತಿಂಗಳುಗಳು ಕಳೆದಿವೆ.ಇನ್ನು ಗಾಂಧಿಜಿಯವರು ಬಹಿರಂಗವಾಗಿ ಸಭೆ ನಡೆಸಿದ ಸ್ಥಳವು ಗ್ರಾಮಸ್ಥರ ಬಹಿರ್ದೆಸೆಯ ತಾಣವಾಗಿ ಬದಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾನ್ ಚೇತನ ತಗುಡುರಿಗೆ ಭೇಟಿ ನೀಡಿದ್ದರು. ಜನ ಪ್ರತಿನಿಧಿಗಳಿ ಅದರ ಅರಿವೇ ಇಲ್ಲದೆ ಇರುವುದು ನಿಜವಾಗಿಯೂ ನೋವಿನ ಸಂಗತಿ.


ಗಾಂದಿ ಗ್ರಾಮದ ಅವ್ಯವಸ್ಥೆ: ಮಹಾತ್ಮ ಗಾಂಧಿಯವರು ಭೇಟಿ ನೀಡಿದ ಪ್ರದೇಶವು ಇಂದು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದೆ.ಗಾಂಧಿ ಗ್ರಾಮದ ಸುತ್ತ ಸುರಕ್ಷತೆಗಾಗಿ ಯಾವುದೇ ರೀತಿಯ ಭದ್ರತೆ ಇಲ್ಲ. ಅನೈತಿಕ ಚಟುವಟಿಕೆಗಳ ತಾಣವಾಗಿದೆ,
ಸ್ಥಳಿಯ ಗ್ರಾಮಸ್ಥರ ತೆಂಗಿನಕಾಯಿಯ ಗೋಡನ್, ಸೌದೆ ಹಾಕುವ ಜಾಗ, ಹಾಗೂ ಬಹಿರ್ದೆಸೆಯ ತಾಣವಾಗಿದೆ. ಹೇಳುವವರು ಕೇಳುವವರು ಇಲ್ಲದೆ ಒಡೆಯನಿಲ್ಲದ ಮನೆಯಾಗಿದೆ.


ತಿಂಗಳುಗಳಿಂದ ಕೆಲಸ ಇಲ್ಲ ಸರ್ಕಾರದಿಂದ ಸರಿಯಾದ ಸಮಯಕ್ಕೆ ಕಚ್ಚಾ ವಸ್ತುಗಳ ಪೂರೈಕೆ ಇಲ್ಲದೆ ಕೆಲವೊಮ್ಮೆ, ಆರು ತಿಂಗಳು ಒಂದು ವರ್ಷ ಆಗಿಂದಾಗೆ ಕೆಲಸಗಳು ಸ್ಥಗಿತಗೊಳ್ಳುತ್ತಿದೆ, ಸಂಭಾವನೆ ಸಾಲುತ್ತಿಲ್ಲ ಎನ್ನುವ ಕಾರಣಕ್ಕೆ ನೈಗೆ ನಿಂತು ಹೋಗಿದೆ. ನೈಗೆಯ ಉಪಕರಣಗಳು ಧೂಳು ಹಿಡಿದು ತುಕ್ಕು ಹಿಡಿಯುತ್ತಿದೆ. ಇದನ್ನೇ ನಂಬಿಕೊಂಡು ಬದುಕುತ್ತಿರುವ ಎಷ್ಟೋ ಕುಟುಂಬಗಳು ಇಂದು ಶಾಲೆಯ ಮಕ್ಕಳಿಗೆ ಫೀಸ್ ಕಟ್ಟಲಾಗದೆ. ಆರ್ಥಿಕ ಸಮಸ್ಯೆಯಿಂದ ಕಣ್ಣೀರು ಸುರಿಸುವ ಪರಿಸ್ಥಿತಿ ಎದುರಾಗಿದೆ.