
ಸಂಜೆವಾಣಿ ನ್ಯೂಸ್
ಮೈಸೂರು. ಆ.03:- 32 ವರ್ಷಗಳ ಕಾಲ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕೆ.ಆರ್. ಸಂಚಾರಿ ಪೆÇಲೀಸ್ ಠಾಣೆಯ ಮುಖ್ಯಪೇದೆ ಎಂ.ಎಸ್. ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನಾರಾಯಣ ಶ್ರೀ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರುಗಳು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲ್ಲಿಕಾರ್ಜುನ ಸ್ವಾಮಿ ಅವರ ಸೇವೆಯನ್ನು ಶ್ಲಾಘಿಸಿದರು.
ನಗುಮುಖದ ಪೆÇಲೀಸ್ ಎಂದೇ ಜನಪ್ರಿಯ
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಮೈಸೂರು ನಗರದಲ್ಲಿ ವಾಹನ ಸವಾರರಿಗೆ ಚಿರಪರಿಚಿತರಾಗಿರುವ ಮಲ್ಲಿಕಾರ್ಜುನ ಸ್ವಾಮಿ ಅವರು, ಯಾರೇ ಎದುರಾದರೂ ನಗುಮುಖದಿಂದ ‘ಗುರುಗಳೇ’ ಅಥವಾ ‘ಅಪ್ಪಾಜಿ’ ಎಂದು ಅಕ್ಕರೆಯಿಂದ ಸಂಬೋಧಿಸುತ್ತಾರೆ. ಅವರ ಸರಳತೆ, ಆತ್ಮೀಯತೆ ಮತ್ತು ಸ್ನೇಹಪರ ನಡೆ ಎಲ್ಲರ ಮನ ಗೆದ್ದಿದೆ ಎಂದು ಹೇಳಿದರು.
ನಿವೃತ್ತ ಜೀವನ ಸುಖಕರವಾಗಿರಲಿ ನಂತರ ಮಾತನಾಡಿದ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, “ಸುದೀರ್ಘ ಸೇವಾ ಜೀವನದ ನಂತರ ನಿವೃತ್ತಿಯ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಅವರಿಗೆ ಹಾರ್ದಿಕ ಶುಭಾಶಯಗಳು. ಅವರ ನಿವೃತ್ತ ಜೀವನವು ಸುಖ, ಶಾಂತಿ, ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ. ಅವರು ಇದೇ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ಎಲ್ಲರಿಂದಲೂ ಪಡೆಯುತ್ತಾ ನೆಮ್ಮದಿಯ ಬದುಕನ್ನು ನಡೆಸಲಿ. ಅವರ ಸೇವೆ ಹಾಗೂ ಮಾನವೀಯ ಗುಣಗಳಿಗೆ ನಮ್ಮ ಹೃತ್ಪೂರ್ವಕ ಮೆಚ್ಚುಗೆಗಳು” ಎಂದು ಹಾರೈಸಿದರು.
ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಿ. ರಾಘವೇಂದ್ರ, ಓಂಕಾರ್ ಆನಂದ್, ವರುಣ ಮಹಾದೇವ್, ಗೋಬಿ ನಾಗ, ಸುಬ್ರಹ್ಮಣ್ಯ, ಎಸ್.ಎನ್. ರಾಜೇಶ್, ದಿನೇಶ್, ಕೃಷ್ಣಪ್ಪ (ಗಂಟಯ್ಯ), ಲೋಕೇಶ್, ಸುನಿಲ್, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.































