Home ಜಿಲ್ಲೆ ಓರ್ವಾಯಿಯಲ್ಲಿ ಮಳೆಗಾಗಿ ದೇವರ ಮೊರೆ ಜಲಾಭಿಷೇಕ

ಓರ್ವಾಯಿಯಲ್ಲಿ ಮಳೆಗಾಗಿ ದೇವರ ಮೊರೆ ಜಲಾಭಿಷೇಕ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.19: ಜಿಲ್ಲೆಯ ಕುರುಗೋಡು ತಾಲ್ಲೂಕಿನ ಓರ್ವಾಯಿ ಗ್ರಾಮದಲ್ಲಿ ನಿನ್ನೆ ಮಳೆಗಾಗಿ ಗ್ರಾಮದ ಜನತೆ ದೇವರಿಗೆ ಜಲಾಭಿಷೇಕದ ಮೂಲಕ ದೇವರ ರ್ಮರೆ ಹೋಗಿದ್ದಾರೆ.

ಮಲೆಯ ಅಭಾವವಾದಾಗ ಗ್ರಾಮಸ್ಥರು ಹಲವು ರೀತಿಯ ಸಂಪ್ರದಾಯಗಳ ಆಚರಣೆಗಳ ಮೂಲಕ ದೇವರಿಗೆ ಮೊರೆ ಹೋಗುತ್ತಾರೆ. ಮಕ್ಕಳು ಕಪ್ಪೆಗಳನ್ನು ಬುಟ್ಟಿಯಲ್ಲಿ ಹೊತ್ತು ಮನೆ ಮನೆಗೆ ತೆರಳಿ ನೀರು ಹಾಕಿಸಿಕೊಳ್ಳುವುದು ಒಂದು ರೀತಿಯ ಆಚರಣೆಯಾದರೆ,

ಬುಡ್ಡೆಕಲ್ಲಪ್ಪ ಸೇರಿದಂತೆ ಗ್ರಾಮದೇವತೆಗಳಿಗೆ ನೋರೊಂದು ಕೊಡ ನೀರಿನಮೂಲಕ ಜಲಾಭಿಷೇಕವನ್ನು ಸಹ ಮಾಡಲಾಗುತ್ತದೆ.

ನಿನ್ನೆ ಓರ್ವಾಯಿ ಗ್ರಾಮದಲ್ಲಿ ಮಳೆ ಬರಲಿ ಎಂದು ಬಗ್ಗೂರಪ್ಪ ಹಾಗೂ ಇತರ ದೇವರ ಮೂರ್ತಿಗಳಿಗೆ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.

ಮಂಜುನಾಥ ಸ್ವಾಮಿ ಎಂಬ ಯುವಕ ಒದ್ದೆ ಬಟ್ಟೆಗಳನ್ನು ಧರಿಸಿ ಮೌನದಿಂದ ಅಭಿಷೇಕ ಕಾರ್ಯ ನೆರವೇರಿಸಿದರು.ಅಲ್ಲದೆ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ ಮೂಲಕ ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.