Home ಜಿಲ್ಲೆ ಎಎಸ್ ಎಂ  ಕಾಲೇಜಿನ ಸುವರ್ಣ ಮಹೋತ್ಸವ ದಾನಿಗಳ ಭಾವಚಿತ್ರದ ಮೆರವಣಿಗೆ

ಎಎಸ್ ಎಂ  ಕಾಲೇಜಿನ ಸುವರ್ಣ ಮಹೋತ್ಸವ ದಾನಿಗಳ ಭಾವಚಿತ್ರದ ಮೆರವಣಿಗೆ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಸೆ.20: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ನಾಳೆ ಸೆ.21 ಮತ್ತು ನಾಡಿದ್ದು 22 ರಂದು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಇದರಂಗವಾಗಿ ಇಂದು.

ಕಾಲೇಜಿನ ದಾನಿಗಳ ಭಾವಚಿತ್ರದ ಮೆರವಣಿಗೆ ಇಂದು ನಡೆಯಿತು.

ದಾನಿಗಳಾದ ಅಲ್ಲಂ ಸುಮಂಗಳಮ್ಮ, ತೊಗರಿ ವೀರಪ್ಪನವರ ಭಾವಚಿತ್ರವೊನ್ನೊಳಗೊಂಡ ಸ್ತಬ್ಧ ಚಿತ್ರಗಳನ್ನು ನಗರದ ಬಸವ ಭವನದಿಂದ ವಿವಿಧ ಕಲಾ ತಂಡಗಳ  ಮೂಲಕ  ಪಾರ್ವತಿನಗರದ ಮುಖ್ಯ ರಸ್ತೆ, ದುರ್ಗಮ್ಮ ಗುಡಿ ಸರ್ಕಲ್ ಮೂಲಕ ಕಾಲೇಜು ಆವರಣಕ್ಕೆ ಮೆರವಣಿಗೆ ಸಾಗಿ ಬಂತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನಂದಿಕೋಲು,  ಚಂಡಿ ಮದ್ದಳೆ, ಕೋಲಾಟದ ಹೆಜ್ಜೆ, ಗೆಜ್ಜೆ ನಿನಾದಕ್ಕೆ  ಮೋಡ  ಮುಚ್ಚಿದ ವಾತಾವರಣ, ಜಿನುಗುತ್ತಿದ್ದ ಮಳೆಯ ಹನಿಗಳ ಮಧ್ಯೆ ಬಿಸಿ ರಕ್ತದ ವಿದ್ಯಾರ್ಥಿನಿಯರು ಹಾಕುತ್ತಿದ್ದ ಹೆಜ್ಜೆಗಳು, ನೃತ್ಯದ ಭಂಗಿಗಳು ನೋಡುಗರ ಗಮನ ಸೆಳೆಯಿತು.

ಶಾಲೆಯ ಇತಿಹಾಸ:

ವಿದ್ಯಾರ್ಥಿನಿಯರು ಪದವಿ ಪಡೆಯಲು ಬೇರೆ ಕಡೆ ಹೋಗುವುದನ್ನು ತಪ್ಪಿಸಲು ಈ ಮಹಿಳಾ ವಿದ್ಯಾಲಯ ಅರಂಭ ಮಾಡಿತು. ಕೇವಲ 164 ವಿದ್ಯಾರ್ಥಿನಿಯರೊಂದಿಗೆ 1969ರಲ್ಲಿ

ಆರಂಭಗೊಂಡಿತು.  ಈ ಕಾಲೇಜಿನಲ್ಲಿ ಈಗ 2500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು. ಅಕ್ಕಮಹಾದೇವಿ ಮಹಿಳಾ ವಿವಿಗೆ ಸಂಲಗ್ನತೆಯನ್ನು ಹೊಂದಿದೆ. ಎಂಕಾಂ ಸ್ನಾತಕೋತ್ತರ ಪದವಿಯನ್ನು ಸಹ ಇಲ್ಲಿ ಭೋದಿಸಲಾಗುತ್ತಿದೆ.   ಇಲ್ಲಿವರೆಗೆ  200 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಱ್ಯಾಂಕ್ ಪಡೆದಿದ್ದಾರೆ.

ನಾಳೆ ಬೆಳಿಗ್ಗೆ 10 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು. ಉಜ್ಜಯಿನಿ ಪೀಠದ ಸಿದ್ದಲಿಂಗ ಶ್ರೀಗಳು, ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.

ಸಂಸದ ಇ.ತುಕರಾಂ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ.  ಸಂಘದ ಅಧ್ಯಕ್ಷ ಡಾ ಕಣೇಕಲ್ ಮಹಾಂತೇಶ್  ಅಧ್ಯಕ್ಷತೆವಹಿಸಲಿದ್ದಾರೆ.

ಅಕ್ಕಹಾದೇವಿ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ, ಜಯದೇವ ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ, ಮೇಯರ್ ಪಿ.ಗಾದೆಪ್ಪ, ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಡಾ. ಚಂದ್ರಶೇಖರ ಪಾಟೀಲ್, ಶಶೀಲ್ ಜಿ. ನಮೋಶಿ, ಶಾಸಕಿ  ಲತಾ ಮಲ್ಲಿಕಾರ್ಜುನ, ತೊಗರಿ ವೀರಪ್ಪನವರ ವಂಶಸ್ಥರಾದ ಚಂದ್ರಶೇಖರ ಪಾಶ್ಚಾಪುರ ಅವರು ಆಗಮಿಸಲಿದ್ದು.

“ಸುವರ್ಣ ಸಿರಿ”- ಸ್ಮರಣ ಸಂಚಿಕೆಯನ್ನು  ಅಲ್ಲಂ ವೀರಭದ್ರಪ್ಪ ಮತ್ತು  ಅಲ್ಲಂ ಸುನಂದಾ ಇವರು ಬಿಡುಗಡೆ ಮಾಡಲಿದ್ದಾರೆ.

ಅಂದು ಸಂಜೆ 4.30 ಕ್ಕೆ  ಸಾಂಸ್ಕೃತಿಕ  ಕಾರ್ಯಕ್ರಮವನ್ನು  ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಉದ್ಘಾಟನೆ ಮಾಡಲಿದ್ದಾರೆ, ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್,  ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ, ಉದ್ಯಮಿ ಗಾಲಿ ಲಕ್ಷ್ಮೀ ಅರುಣಾ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಶಾಲೆಯ ಹಳೇ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು. ನಂತರ  ಸಂಜೆ 6.30ರಿಂದ 9.30ರವರೆಗೆ “ಗಾಯನ ಸುಧೆ” ಶ್ರೀ ರಾಮಚಂದ್ರ ಜಿ. ಹಡಪದ್ ಕಲಾತಂಡದಿಂದ ನಡೆಯಲಿದೆ.

ಸಂಘದ ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ,  ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ,  ಕಾರ್ಯಕಾರಿ ಸಮಿತಿ ಸದಸ್ಯರಾದ ಚೋರನೂರು ಟಿ.ಕೊಟ್ರಪ್ಪ,  ಅಲ್ಲಂ, ಪ್ರಮೋದ್,  ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಸಂಘದ  ಅಜೀವ ಸದಸ್ಯರು.  ಪ್ರಾಂಶುಪಾಲರಾದ ದೂಪಂ ಸತೀಶ್, ಡಾ. ಗೋವಿಂದರಾಜುಲು, ಉಪನ್ಯಾಸಕರು, ಭೋದಕೇತರ ಸಿಬ್ಬಂದಿ  ಜೊತೆ ನೂರಾರು ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು.