Home ಜಿಲ್ಲೆ ಮಂಗಳೂರು ಸುಳ್ಯ ನಗರದ ರಸ್ತೆ ದುರಸ್ಥಿ ಮಾಡುವಂತೆ ವರ್ತಕರ ಸಂಘದಿಂದ ತಹಸೀಲ್ದಾರರಿಗೆ ಮನವಿ

ಸುಳ್ಯ ನಗರದ ರಸ್ತೆ ದುರಸ್ಥಿ ಮಾಡುವಂತೆ ವರ್ತಕರ ಸಂಘದಿಂದ ತಹಸೀಲ್ದಾರರಿಗೆ ಮನವಿ

ಸುಳ್ಯ:ಸುಳ್ಯ ನಗರದ ಕೆಲವು ಹೃದಯ ಭಾಗವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದಲ್ಲಿ ನಾವೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಈ ಭಾಗದಲ್ಲಿರುವ ವರ್ತಕರಿಗೆ ಮತ್ತು ಗ್ರಾಹಕರಿಗೆ ತೊಂದರೆ ಆಗುತ್ತಿದ್ದು ಕೂಡಲೇ ರಸ್ತೆ ದುರಸ್ಥಿ ಮಾಡುವಂತೆ ನ.ಪಂ.ಆಡಳಿತಾಕಾರಿ, ತಹಸೀಲ್ದಾರ್ ಮಂಜುಳಾ ಅವರಿಗೆ ವರ್ತಕರ ಸಂಘ ಮನವಿ ಮಾಡಿದೆ.
ಈ ರಸ್ತೆ ಅಭಿವೃದ್ಧಿಗೆ ನಗರ ಪಂಚಾಯತಿನಿಂದ ಹಣ ಮೀಸಲಿರಿಸಿದ್ದರು ಅದು ಬೇರೆ ಕಾರ್ಯಗಳಿಗೆ ಉಪಯೋಗವಾಗಿದೆ. ಇದರಿಂದ ರಸ್ತೆಯಲ್ಲಿ ವಾಹನ ಮತ್ತು ಜನಸಂಚಾರಕ್ಕೆ ತೊಂದರೆ ಉಂಟಾಗಿದೆ. ರಸ್ತೆಯ ಅಭಿವೃದ್ಧಿಯಿಂದ ವಾಣಿಜ್ಯ ಸಂಕೀರ್ಣದ ವರ್ತಕರಿಗೂ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದ್ದು ಅತಿ ಶೀಘ್ರದಲ್ಲಿ ರಸ್ತೆಯನ್ನು ನಿರ್ಮಿಸಿ ಕೊಡಬೇಕೆಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಕೆ.ಎಂ.ಅಬ್ದುಲ್ ಹಮೀದ್, ಗೌರವಾಧ್ಯಕ್ಷ ಪಿ.ಬಿ. ಸುಧಾಕರ್ ರೈ ಉಪಾಧ್ಯಕ್ಷರುಗಳಾದ ಗಣೇಶ್ ಭಟ್, ಪ್ರಭಾಕರ ನಾಯರ್ ಕಾರ್ಯದರ್ಶಿಗಳಾದ ರಮೇಶ್ ಶೆಟ್ಟಿ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್, ಇಬ್ರಾಹಿಂ ಕದಿಕಡ್ಕ, ಜೊತೆ ಕಾರ್ಯದರ್ಶಿ ರಹೀಮ್ ಪಟೇಲ್ ಸೇರಿದಂತೆ ವರ್ತಕ ಸಂಘದ ಪದಾಕಾರಿಗಳು ಉಪಸ್ಥಿತರಿದ್ದರು.