Home ಜಿಲ್ಲೆ ಸಿಂಡಿಕೇಟ್ ಸದಸ್ಯನಾಗಿ ಜವಾಬ್ದಾರಿ ಸ್ವೀಕಾರ

ಸಿಂಡಿಕೇಟ್ ಸದಸ್ಯನಾಗಿ ಜವಾಬ್ದಾರಿ ಸ್ವೀಕಾರ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.06: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಗೆ ನೂತನ ಸದಸ್ಯರನ್ನಾಗಿ ಬಿಜೆಪಿ ಮುಖಂಡ ಶರಣ್ ಕುಮಾರ್ ಎಸ್.ಆರ್. ಅವರನ್ನು ನೇಮಕ ಮಾಡಿ ರಾಜ್ಯಪಾಲಥಾವರ್ ಚಂದ್ ಗೆಹ್ಲೋಟ ನೇಮಕ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಸಿಂಧಿಗೇರಿ ಗ್ರಾಮದವರಾದ ಇವರು ಈಗ ಬಳ್ಳಾರಿ ನಗರ ನಿವಾಸಿಗಳು. 2008ರಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರಿನಲ್ಲಿ ಎಂಸಿಎ ಪದವಿಯನ್ನು ಪಡೆದು ನಗರದ ವೀರಶೈವ ಕಾಲೇಜಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಉಪನ್ಯಾಸಕರಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಜೊತೆಗೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಜೆಪಿಯಲ್ಲಿ ಮುಖಂಡರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಎನ್ ಎಸ್ ಎಸ್ ವಿಭಾಗದ ಅಡ್ವೈಸರ್ ಕಮಿಟಿ ಸದಸ್ಯರಾಗಿದ್ದಾರೆ.