
ಮಂಗಳೂರು-“ವಿದ್ಯಾಭ್ಯಾಸದ ಹಂತದಲ್ಲಿ ಸಿಗುವಂತಹ ಅವಕಾಶಗಳೆಲ್ಲವನ್ನು ಸದ್ವಿನಿಯೋಗ ಮಾಡಿಕೊಂಡು ಒಂದು ನಿರ್ದಿಷ್ಟ ಗುರಿಯನ್ನು ತಲುಪುವುದಕ್ಕೆ ಮಾಡುವ ಸತತ ಪ್ರಯತ್ನವೊಂದೇ ಸಾಧನೆಯ ಮೆಟ್ಟಿಲು. ಕಲೆ ಮತ್ತು ಶಿಕ್ಷಣವನ್ನು ಸಮಪ್ರಮಾಣದಲ್ಲಿ ಸ್ವೀಕರಿಸಿ, ಜೀವನದಲ್ಲಿ ಶಿಸ್ತಿನಿಂದ ಬದುಕಿನ ಸವಾಲುಗಳನ್ನು ಎದುರಿಸಿದರೆ ಖಂಡಿತವಾಗಿಯೂ ಯಶಸ್ಸನ್ನು ಗಳಿಸಬಹುದು” ಎಂದು ಶಾರದಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘವು ಏರ್ಪಡಿಸಿದ “ಫಿಯೆಸ್ಟಾ ಡೆಲ್ ಕೋಮರ್ಸ್” ವಾಣಿಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ‘ಸ್ವರಾಲಯ ಸಾಧನಾ ಫೌಂಡೇಶನ್ನ ಸ್ಥಾಪಕರಾದ ಸಿ.ಎ. ಶ್ರೇಷ್ಠ ಲಕ್ಷ್ಮಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ನಿರ್ದೇಶಕ ಮತ್ತು ವಿಶ್ವಸ್ಥರಾದ ಶ್ರೀ ಸಮೀರ್ ಪುರಾಣಿಕ್ ಇವರು ವಾಣಿಜ್ಯ ವಿದ್ಯಾರ್ಥಿಗಳು ತಮಗೆ ದೊರಕುವ ಎಲ್ಲಾ ಅವಕಾಶಗಳನ್ನು ಉಪಯೋಗಿಸಿ ಸ್ಪರ್ಧಾರ್ತಕ ಜಗತ್ತಿನಲ್ಲಿ ಸಾಧನೆಯ ಉತ್ತುಂಗದ ಶಿಖರಕ್ಕೇರಬೇಕೆಂದು ಶುಭ ಹಾರ್‍ಯೆಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ್ ಇವರು ವಿದ್ಯಾರ್ಥಿಗಳಿಗೆ ಶುಭಾಶಂಸನೆಗ್ಯೆದರು. ವೇದಿಕೆಯಲ್ಲಿ ಉಪಪ್ರಾಶುಪಾಲೆ ಶ್ರೀಮತಿ ಅರುಣಾ ಕುಮಾರಿ, ವಿದ್ಯಾರ್ಥಿಗಳ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ಗುರುರಾಜ್ ಬಿ, ಶ್ರೀಮತಿ ಮನುಜಾ ದಿನೇಶ್, ಸಂಖ್ಯಾಶಾಸ್ತ್ರ ಮುಖ್ಯಸ್ಥೆ ಶ್ರೀಮತಿ ಸ್ಮಿತಾ ಪೈ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶ್ರೀ ಸೀತಾರಾಮ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶಾಲಿನಿ ಅತಿಥಿ ಗಣ್ಯರುಗಳನ್ನು ಸ್ವಾಗತಿಸಿದರು.
ವಿದ್ಯಾರ್ಥಿನಿ ಕು| ದಿಶಾ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿನಿಯರಾದ ಕು| ತನುಶ್ರೀ ಮತ್ತು ಕು| ಮೇಧಾ ಭಟ್ ಪ್ರಾರ್ಥಿಸಿದರು. ವಾಣಿಜ್ಯ ಸಂಘದ ಕಾರ್ಯದರ್ಶಿ ಕು| ಲಕ್ಷ್ಯಾ ಎನ್ ವಂದನಾರ್ಪನೆ ಮಾಡಿದರು.



























