Home ಜಿಲ್ಲೆ ವಯೋನಿವೃತ್ತಿ ಬೀಳ್ಕೊಡುಗೆ

ವಯೋನಿವೃತ್ತಿ ಬೀಳ್ಕೊಡುಗೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಸೆ.01: ನಗರದ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆಸಲ್ಲಿಸಿ ನಿನ್ನೆ ವಯೋ ನಿವೃತ್ತಿ ಹೊಂದಿದ ಟಿ.ಜಿತೇಂದ್ರ ಇವರಿಗೆ  ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

 31 ವರ್ಷಗಳ ಸೇವೆಯ ಉತ್ತಮ ಕಾರ್ಯವೈಖರಿಯ ಬಗ್ಗೆ ಸಹೋದ್ಯೋಗಿ ಮಿತ್ರರು, ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯಾಳಿ ಮೇಟಿ ಪಂಪನಗೌಡ  ಅಧ್ಯಕ್ಷತೆ ವಹಿಸಿದ್ದರು. ವೀ.ವಿ.ಸಂಘದ ಕೋಶಾಧಿಕಾರಿ ಬೈಲುವದ್ದಿಗೇರಿ ಎರಿಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರುಪಾಕ್ಷಪ್ಪ, ಶಾಲಾ ಆಡಳಿತ ಮಂಡಳಿ ಸದಸ್ಯರು, ವಿಶ್ರಾಂತ ಶಿಕ್ಷಕ ಸಿ.ಎಂ.ಗಂಗಾಧರಯ್ಯ, ಶಲ ಕೆ.ಹೆಚ್.ಎಂ.ತಿಪ್ಪೇಸ್ವಾಮಿ,  ಸರಳಕುಮಾರಿ  ಮುಂತಾದವರು ಇದ್ದರು. ಶಾಲೆಯ ಮುಖ್ಯ ಗುರು  ಎ. ಮರಿಸ್ವಾಮಿ ಸ್ವಾಗತಿಸಿದರು.  ಎಲ್.ಜಯಂತಿ ನಿರೂಪಣೆ ಮಾಡಿದರು. ಮಠದ ಯಶೋಧ’ ವಂದಿಸಿದರು.