Home ಜಿಲ್ಲೆ ಬೆಂಗಳೂರು ಯೋಗ ಭಾರತೀಯ ಸಂಸ್ಕೃತಿಯ ಪರಂಪರೆ

ಯೋಗ ಭಾರತೀಯ ಸಂಸ್ಕೃತಿಯ ಪರಂಪರೆ

ಬೆಂಗಳೂರು, ಜೂ. 21- ಬಿಜೆಪಿ ಪಕ್ಷದ ವತಿಯಿಂದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ


ಲೋಕಸಭಾ ಸದಸ್ಯ ತೇಜಸ್ವಿಸೂರ್ಯ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಬ್ರಹ್ಮಕುಮಾರಿ, ಲೀಲಕ್ಕಾರವರು ಯೋಗಗುರು ನಾರಾಯಣ್ , ಶಂಕರ್ ಮಂಡಲ ಅಧ್ಯಕ್ಷ ಮಂಜುನಾಥ್ ಎನ್.ಬಿ, ರಾಮಪ್ಪರವರು ದೀಪ ಬೆಳಗಿಸಿ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೇಜಸ್ವಿಸೂರ್ಯ ಮಾತನಾಡಿ ದೇಶ ಸುರಕ್ಷತೆ ಇದೆ ಎಂದರೆ ವೀರಯೋಧರು ಕಾರಣ ಅವರು ಪ್ರಾಣದ ಹಂಗು ತೊರೆದು ನಮ್ಮೆಲ್ಲರ ಜೀವ ರಕ್ಷಣೆ ಮಾಡುತ್ತಿದ್ದಾರೆ.
ಯೋಗ ಭಾರತೀಯ ಸಂಸ್ಕೃತಿ, ಪರಂಪರೆ ಇರುವ ಯೋಗ ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ, ಯೋಗಕ್ಕೆ ಜಾತಿ, ಮತ, ಧರ್ಮ ಭೇಧವಿಲ್ಲ. ಮನಸ್ಸು ದೇಹ, ಬುದ್ಧಿ ಒಂದು ಮಾಡುವ ಕ್ರಿಯ ಪದ್ಧತಿ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ ಮಾಡಬೇಕಾದರೆ ಅದರ ಅನುಭವ ಪಡೆಯಲು ಉಸಿರು, ಮನಸ್ಸು ಒಂದಾಗಬೇಕು. ನಮ್ಮ ತಾಯಿಯವರಿಗೆ ಅಸ್ತಮಾ ಸಮಸ್ಯೆ ಇತ್ತು ಯೋಗ ಮಾಡುವುದರಿಂದ ಅಸ್ತಮಾ ರೋಗ ತಡೆಯಲು ಸಾಧ್ಯವಾಯಿತು.


ಮಕ್ಕಳು, ಯುವ ಸಮುದಾಯ ಮೊಬೈಲ್ ಗಳಿಂದ ದೂರವಿರಿ, ಮಾನಸಿಕ ಒತ್ತಡ, ನೆನಪಿನ ಶಕ್ತಿ, ಆರೋಗ್ಯವಂತ ದೇಹ ಹೊಂದಲು ಪ್ರತಿದಿನ 30ನಿಮಿಷ ಯೋಗ ಮತ್ತು 1ಗಂಟೆ ಧ್ಯಾನ ಮಾಡಿದಾಗ ರೋಗದಿಂದ ಮುಕ್ತರಾಗಬಹುದು. ಪ್ರಧಾನಿ ನರೇಂದ್ರಮೋದಿರವರು ಯೋಗದ ಮಹತ್ವ ಸಾರಲು ಇಂದು 182ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಎಂದು ಹೇಳಿದರು.


ಕೆ.ಉಮೇಶ್ ಶೆಟ್ಟಿ ರವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗದ ಮಹತ್ವ ಸಾರಲು 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಚರಿಸಲಾಗಿದೆ.
180ಕ್ಕಿಂತ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಯೋಗ ಮಹತ್ವವನ್ನು ವಿಶ್ವಕ್ಕೆ ಸಾರಿದವರು ಪ್ರಧಾನಿ ನರೇಂದ್ರಮೋದಿರವರು.
ಎಲ್ಲ ಶಾಲೆಗಳಲ್ಲಿ ಯೋಗಭ್ಯಾಸ ಕಲಿಸಬೇಕು ಮತ್ತು ಯೋಗದ ಮಹತ್ವ, ಉಪಯೋಗ ಹಾಗೂ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದು ಸಾರ್ವಜನಿಕರಿಗೆ ಅರಿವು ಮೂಡಿಸಲು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.