Home ಜಿಲ್ಲೆ ಮಂಗಾಪುರ ಸರ್ಕಾರಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆ

ಮಂಗಾಪುರ ಸರ್ಕಾರಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆ

ಸಂಜೆವಾಣಿ ವಾರ್ತೆ:

ಕೊಟ್ಟೂರು, ಸೆ.05: ಸೆಪ್ಟೆಂಬರ್5: ಕೊಟ್ಟೂರು ತಾಲ್ಲೂಕಿನ ಮಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿ, ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ120 ಕ್ಕೂ ಹೆಚ್ಚಿನ  ಸಸಿಗಳನ್ನು ನೆಡಲಾಯಿತು. ಸಸಿ ನೆಡುವ ಮೂಲಕ ಪರಿಸರದ ಮೇಲಿನ ಕಾಳಜಿ ಮತ್ತು ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸುವ ಜವಾಬ್ದಾರಿಯ ಸಂದೇಶವನ್ನು ಶಿಕ್ಷಕರು ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಗೌರಮ್ಮ  ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯ ಜ್ಞಾನವನ್ನು ಬೆಳೆಸುವುದಷ್ಟೇ ಶಿಕ್ಷಕರ ಕರ್ತವ್ಯವಲ್ಲ.

ಪರಿಸರ ಪ್ರೀತಿ, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ನಾಗರಿಕ ಮೌಲ್ಯಗಳನ್ನು ಬೆಳೆಸುವುದು ಕೂಡ ಶಿಕ್ಷಣದ ಭಾಗವಾಗಿದೆ” ಎಂದು ಹೇಳಿದರು.ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಸಿಗಳಿಗೆ ನೀರುಣಿಸುವುದು ಹಾಗೂ ಅವುಗಳ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳುವ ಸಂಕಲ್ಪ ಮಾಡಿದರು. ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಕಾರ್ಯದ ಮೂಲಕ ಆಚರಿಸಿರುವುದು ಸಾರ್ವಜನಿಕರ  ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮದಲ್ಲಿ ಶಾಲೆಯSಆಒಅ ಅಧ್ಯಕ್ಷರಾದ ಜಿ ಬನ್ನಿಗೌಡ, ಶಿಕ್ಷಕರಾದ ಮಂಜುಳಾ,ಚನ್ನಮ್ಮ,ಸಿದ್ದಲಿಂಗಪ್ಪ,ಗುರು ಸೇರಿದಂತೆ  ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.