
ಸಂಜೆವಾಣಿ ವಾರ್ತೆ
ಹನೂರು ಜು 14 :- ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ 12,93,270 /- ರೂ ಅನುದಾನವನ್ನು ಬಳಕೆ ಮಾಡಿರುವುದರ ಬಗ್ಗೆ ವರದಿ ದಾಖಲೆಗಳನ್ನು ನೀಡುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್ ತಿಳಿಸಿದ್ದಾರೆ.
ಹನೂರು ತಾಲೂಕಿನ ಮಹಾಲಿಂಗನ ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪಾಟೀಲ್ ಅವರು ಮತದಾನ ಪರಿಷ್ಕರಣೆ ಕುರಿತು ಮಾಹಿತಿ ಪಡೆದಿದು ಶಾಲೆಯ ಮಕ್ಕಳು ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬಿ.ಆರ್.ಸಿ ವೆಂಕಟೇಶ್ ಇದ್ದರು.
ಹಾಗೂ ಹನೂರು ಪಟ್ಟಣದ ಬಿ.ಅರ್.ಸಿ ಕಛೇರಿಗೆ ಡಿ.ಡಿ.ಪಿ.ಐ ಚಂದ್ರಪಾಟೀಲ್ ಭೇಟಿ ನೀಡಿ ಕೆಲ ಕಾಲ ಚರ್ಚೆ ನಡೆಸಿ ಶೈಕ್ಷಣಿಕ ವಲಯದಲ್ಲಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ 12,93,270 /- ರೂ ಅನುದಾನವನ್ನು ಬಳಕೆ ಮಾಡಿರುವುದರ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದಾರೆ.
“ಹನೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯ ಅನುದಾನ ದುರ್ಬಳಕೆ”. “ವಿವಿಧ ಖರ್ಚು ವೆಚ್ಚದ ಹೆಸರಲ್ಲಿ ಲಕ್ಷಾಂತರ ರೂ. ಗೊಲ್ ಮಾಲ್” ಎಂಬ ಶೀರ್ಷಿಕೆಯಲ್ಲಿ ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಮಾಡಿ ಶಿಕ್ಷಣ ಇಲಾಖೆಯ ಗಮನ ಸೆಳೆಯಲಾಗಿತ್ತು. ವರದಿ ಸ್ಪಂದಿಸಿದ ಡಿ.ಡಿ.ಪಿ.ಐ ಅವರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ತಿಳಿಸಿದ್ದಾರೆ.

































