
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.05: ಮನೆ ಮನೆಗೆ ಹೋಗದೆ, ಎಲ್ಲಂದರಲ್ಲಿ ಶಾದಿ ಮಹಲ್, ದರ್ಗಾ, ಮದರಸಾ, ಮೊಹಲ್ಲಾಗಳಲ್ಲಿ ಗುಂಪಾಗಿ ಕುಳಿತು,
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಯ ಎನ್ಯುಮರೇಷನ್ ಪಾರಂ ತುಂಬುತ್ತಿದ್ದಾರೆ. ಇದು ನಿಯಮಗಳ ಉಲ್ಲಂಘನೆಯಾಗಿದೆ. ಅದಕ್ಕಾಗಿ ಇದರಲ್ಲಿ ಪಾಲ್ಗೊಂಡ ಬಿಎಲ್ ಓ ಗಳನ್ನು ತಕ್ಷಣ ಬಂಧಿಸಬೇಕು.
ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅಣತಿಯಂತೆ
ಎಸ್ ಐ ಆರ್ ನಡೆಸುತ್ತಿರುವ ಅಧಿಕಾರಿಗಳು
ಕುಕಿಗಳಾಂತಾಗಿದ್ದಾರೆ. ಅವರು ಹೇಳಿದಂತೆ ಮಾಡುತ್ತಿದ್ದಾರೆ. ಅದಕ್ಕಾಗಿ ಎಸ್ ಐ ಆರ್ ನ್ನು ದಿಕ್ಕುತಪ್ಪಿಸುವ ಕೆಲಸ ನಡೆದಿದೆ. ಅದಕ್ಕಾಗಿ ಈವರೆಗಿನ ಎಸ್ ಐ ಆರ್ ಪ್ರಕ್ರಿಯೆ ರದ್ದು ಮಾಡಿ ಚುನಾವಣಾ ಆಯೋಗ ಮಧ್ಯ ಪ್ರವೇಶ ಮಾಡಿ ಕಟ್ಟು ನಿಟ್ಟಿನಲ್ಲಿ ಆಗಬೇಕು ಎಂದರು.
ಅಕ್ರಮ ಬಾಂಗ್ಲಾ ವಲಸಿಗರು ಪಶ್ಚಿಮ ಬಂಗಾಳ, ಬಿಹಾರ ಮುಂತಾದ ರಾಜ್ಯಗಳಿಂದ ಹೊರ ಬಿದ್ದವರು ಈಗ ಕರ್ನಾಟಕದಲ್ಲಿ ಆಶ್ರಯಪಡೆದಿದ್ದು. ಅವರಿಗೆ ಕಾಂಗ್ರೆಸ್ ವಾಸತ್ವ ನೀಡುತ್ತಿದೆಂದು ಆರೋಪಿಸಿದರು.
ಚುನಾವಣೆಯನ್ನು ಅಕ್ರಮವಾಗಿ ಬೋಗಸ್ ಓಟರ್ ನಿಂದ ಗೆಲ್ಲಲ್ಲು ಈಗಿನಿಂದಲೇ ಪ್ರಯತ್ನ ನಡೆದಿದೆ ಇದನ್ನು ಖಂಡಿಸುವೆ ಎಂದರು.
ಈಗಲೂ ನಾನು ಬದ್ದನಾಗಿದ್ದೇನೆ ಕೌಲ್ ಬಜಾರ್ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ. ಅದನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಎಂದರು.
ಬಿ.ಎಸ್. ವಿಜಯೇಂದ್ರ ಅವರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹೀಗಿರುವಾಗ ನಾನು ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರುಗಳಾದ ಶ್ರೀನಿವಾಸ್ ಮೋತ್ಕರ್, ಕೆ.ಎಸ್.ಅಶೋಕ್, ಕೆ.ಹನುಮಂತಪ್ಪ , ಪಿ.ಪಾಲಣ್ಣ, ಓಬಳೇಶ, ಎಸ್.ಮಲ್ಲನಗೌಡ, ತಿಮ್ಮಪ್ಪ ಮೊದಲಾದವರು ಇದ್ದರು.






























