Home ಜಿಲ್ಲೆ ಮೈಸೂರು ನಾಳೆ ಕೆ.ವಿ. ಶಂಕರಗೌಡ ಕೆ.ಎಸ್. ಸಚ್ಚಿದಾನಂದ ಪ್ರಶಸ್ತಿಗಳ ಪ್ರದಾನ: ಡಾ.ರಾಮಲಿಂಗಯ್ಯ

ನಾಳೆ ಕೆ.ವಿ. ಶಂಕರಗೌಡ ಕೆ.ಎಸ್. ಸಚ್ಚಿದಾನಂದ ಪ್ರಶಸ್ತಿಗಳ ಪ್ರದಾನ: ಡಾ.ರಾಮಲಿಂಗಯ್ಯ

ಸಂಜೆವಾಣಿ ವಾರ್ತೆ
ಮಂಡ್ಯ:ಜು.14:-
ಜನತಾ ಶಿಕ್ಷಣ ಟ್ರಸ್ಟ್ ನಿಂದ ನಿತ್ಯ ಸಚಿವ ಕೆ.ವಿ. ಶಂಕರಗೌಡರ 111ನೇ ಜನ್ಮದಿನಾಚರಣೆ ಹಿನ್ನಲೆ ರಾಜ್ಯ ಮಟ್ಟದ ಕೆ.ವಿ. ಶಂಕರಗೌಡ ಮತ್ತು ಕೆ.ಎಸ್. ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.15ರಂದು ಬೆಳಗ್ಗೆ 11 ಗಂಟೆಗೆ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿತ್ಯಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕೆ.ವಿ.ಶಂಕರಗೌಡ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ರಾಮಲಿಂಗಯ್ಯ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕ ಮನೆ ಎಂ.ಅಂಕೇಗೌಡ ಅವರು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡುವರು. ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ಖಜಾಂಚಿ ಚಂದ್ರಕಲಾ ಶಿವಾನಂದ ಉಪಸ್ಥಿತರಿರುವರು.
ರಾಜ್ಯಮಟ್ಟದ ರಂಗಭುಮಿ ಪ್ರಶಸ್ತಿಗೆ ಡಾ.ಎ.ವಿ.ಉಮೇಶ್, ಸಮಾಜಸೇವ ಪ್ರಶಸ್ತಿಗೆ ಡಾ.ಬಿ.ಸುಜಯ್‍ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಶ್ರೀಧರ್ ಹಾಜರಿದ್ದರು.