Home ಜಿಲ್ಲೆ ಜೂ.17 ನಗರಕ್ಕೆ ಎಸ್ ಐ ಆರ್ ಜನಜಾಗೃತಿ ಜಾಥಾ

ಜೂ.17 ನಗರಕ್ಕೆ ಎಸ್ ಐ ಆರ್ ಜನಜಾಗೃತಿ ಜಾಥಾ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ: ಜೂ.14: ಮತಪಟ್ಟಿ ವಿಶೇಷ ಪರಿಷ್ಕರಣೆ(ಎಸ್ ಐ ಆರ್ ) ವಿರೋಧಿ ಜನ ಜಾಗೃತಿ ಜಾಥಾ ನಿನ್ನೆಯಿಂದ ರಾಜ್ಯದಲ್ಲಿ ಆರಂಭಗೊಂಡಿದ್ದು. ಬೀದರ್ ನಿಂದ ಆರಂಭಗೊಂಡಿರುವ ಜಾಥಾ ಜೂ 17 ಕ್ಕೆ ಬಳ್ಳಾರಿ ನಗರಕ್ಕೆ ಆಗಮಿಸಲಿದೆಂದು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿದ್ದಣ್ಣ ಹೇಳಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಎಸ್ ಐ ಆರ್ ವಿರೋಧಿ ಜಾತ್ಯತೀತ ಪಕ್ಷಗಳು -ಜನಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ರಜ್ಯದೆಲ್ಲೆಡೆ ನಡೆಯುವ ಜಾಥಾ ಜೂ 20 ಕ್ಕೆ ಪ್ರತಿರೋಧದ ಬೃಹತ್ ಪಾದಯಾತ್ರೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆಂದರು.

ಅಕ್ಷರ ದೋಷ, ವಯಸ್ಸಿನ ವ್ಯತ್ಯಾಸ ವೆಂದು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುವುದು ಸರಿಯಲ್ಲ ಎಂದರು.

ಈಗಾಗಲೇ ಅನೇಕ ರಾಜ್ಯಗಳಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತೋರದೆ ವಿನಾಕಾರಣ ಲಕ್ಷಾಂತರ ಜನರನ್ನು ಪತಪಟ್ಟಿಯಿಂದ ಹೊರಗಿಟ್ಟಿದೆ. ಅದಕ್ಕಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆಂದು ಹೇಳಿದರು.

ಜಾಥಾ ಜೂ.17 ಸಂಜೆ ನಗರಕ್ಕೆ ಬರಲಿದ್ದು ಗವಿಯಪ್ಪ ಸರ್ಕಲ್ ನಿಂದ ಗಾಂಧಿಬವನದ ವರೆಗೆ ಸಾಗಿ ಅಲ್ಲಿ ಜಾಗೃತಿ ಸಭೆ ನಡೆಯಲಿದೆ. ರೈತ ಸಂಘದ ಮುಖಂಡ ವೀರಸಂಗಯ್ಯ ಮೊದಲಾದವರು ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದರು.

ಸುದ್ದಿಗೋಷ್ಟಿಯಲ್ಲಿ ಸಂಗನಕಲ್ಲು ವಿಜಯಕುಮಾರ್, ಅಮ್ಜದ್, ಎರುಕುಲಸ್ವಾಮಿ, ವೀರೇದ್ರ, ಗೋವರ್ಧನ, ವಸಂತ ಕಾಳೆ ವೀಣಾ ಕುಮಾರಿ, ಹುಮಾಯೂನ್ ಖಾನ್ ಮೊದಲಾದವರು ಇದ್ದರು.