
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.14- ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 3 ವರ್ಷಗಳ ಅವಧಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೆ ಹೆಚ್ಚು ಅನುದಾನವನ್ನು ವಿನಿಯೋಗಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಅಯೋಜಿಸಿದ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ವಿವಿಧ ಇಲಾಖೆಗಳಿಂದ ಮೂರು ವರ್ಷಗಳ ಅವಧಿಯಲ್ಲಿ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಿಂದ 20 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 58.71 ಕೋಟಿ,ಕಾರ್ಮಿಕ ಇಲಾಖೆಯಿಂದ 40.1 ಕೋಟಿ, ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಿಂದ 20.93 ಕೋಟಿ, ಅರಣ್ಯ ಇಲಾಖೆ 42.58 ಕೋಟಿ, ಸಣ್ಣ ನೀರಾವರಿ ಇಲಾಖೆ ಯಿಂದ 19.55 ಕೋಟಿ, ಸಣ್ಣ ಸಮಾಜ ಕಲ್ಯಾಣ ಇಲಾಖೆಯಿಂದ 19.46 ಕೋಟಿ, ಕಾವೇರಿ ನಿಗಮದಿಂದ 783.85 ಕೋಟಿ, ಸೆಸ್ಕಾಂ 32.42 ಕೋಟಿ. ಕೆಪಿಟಿಸಿಎಲ್ನಿಂದ 38.65 ಕೋಟಿ, ಕೆಐಎಡಿಬಿ ಯಿಂದ 219.15 ಕೋಟಿ, ಅಂಗವಿಕಲರ ಕಲ್ಯಾಣ ಇಲಾಖೆಯಿಂದ 211 ಕೋಟಿ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 11.5 ಕೋಟಿ ಸೇರಿ ಒಟ್ಟು ಎರಡು ಸಾವಿರದ ಹನ್ನೆರಡು ಕೋಟಿ ಅರವತ್ತು ಮೂರು ಲಕ್ಷದ ಹದಿನೆಂಟು ಸಾವಿರ ವೆಚ್ಚ ಮಾಡಲಾಗಿದೆ ಎಂದರು.
ಅಲ್ಲದೆ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು, ಸಮುದಾಯ ಭವನಗಳು, ಸಿಮೆಂಟ್ ರಸ್ತೆ, ಚರಂಡಿ, ಗ್ರಾಮಗಳ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ನಿರ್ಮಾಣ, ರಸ್ತೆ ಅಭಿವೃದ್ಧಿ, ಶಾಲಾ, ಕಾಲೇಜು, ಆಸ್ಪತ್ರೆ, ಅಂಗನವಾಡಿಗಳ ಅಭಿವೃದ್ಧಿಗೆ ಒತ್ತು ನೀಡಿ ಮಾದರಿ ಕ್ಷೇತ್ರವಾಗಿ ಮಾಡಲು ಶ್ರಮಿಸಿದ್ದೇನೆ ಅದೇ ರೀತಿ ನಗರದ ನಗರಸಭಾ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಅಗಲೀಕರಣ, ಮಳೆನೀರು ಹಾದು ಹೋಗುವ ಕಾಲುವೆಗಳ ಅಭಿವೃದ್ಧಿ, ಒಳ ಚರಂಡಿ ನಿರ್ಮಾಣ, ಹೊಸ ಬಡಾವಣೆ ಗಳಿಗೆ ಯುಜಿಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದರೂ ಸಹ ಸಾರ್ವಜನಿಕ ಅಸಹಕಾರ, ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಬಿ.ರಾಚಯ್ಯ, ನ್ಯಾಯಾಲಯ ರಸ್ತೆ, ಸಚಿವನಾಗುವ ವಿಶ್ವಾಸ ಇದೆ : ಜಿಲ್ಲೆಯ ಕೋಟಾದಡಿಯಲ್ಲಿ ಈ ಬಾರಿ ಸಚಿವನಾಗುವ ವಿಶ್ವಾಸ ಇದೆ. ಕಾಂಗ್ರೆಸ್ ವರಿಷ್ಠರು ಸಹ ಈ ಬಾರಿ ಹಿರಿಯ ಶಾಸಕನಾದ ನನಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ಈ ಬಾರಿ ಚಾಮರಾಜನಗರ ಗ್ರಾಮೀಣ ದಸರಾ ಆಚರಣೆಗೆ ಮುಖ್ಯಮಂತ್ರಿಗ¼ ಒಪ್ಪಿಗೆ ನೀಡಿದ್ದು, ಅನುದಾನವನ್ನು ಸಹ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ಪತ್ರಕರ್ತರು ಭಾಗವಹಿಸಿದ್ದರು.

































