Home ಜಿಲ್ಲೆ ಕೂಡ್ಲಿಗಿ ಪ್ರಜಾಸೇವ ಉದ್ಘಾಟನಾ ಸಮಾರಂಭ.

ಕೂಡ್ಲಿಗಿ ಪ್ರಜಾಸೇವ ಉದ್ಘಾಟನಾ ಸಮಾರಂಭ.

ಸಂಜೆವಾಣಿ ವಾರ್ತೆ

ಕೂಡ್ಲಿಗಿ. ಸೆ. 5 :- ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕನಸಿನ ಕೂಸಿನ ಯೋಜನೆಯಾದ ಪ್ರಜಾಸೇವಾ ಇಲಾಖೆ ಹಾಗೂ ಆಂದೋಲನಕ್ಕೆ ಇಂದು ಅಧಿಕೃತ ಚಾಲನೆ ನೀಡುವ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಹನುಮಂತು ಅವರಿಂದ ಜಾನಪದ ಗೀತೆಗಳ ಅರ್ಥಪೂರ್ಣ ಗಾಯನ ನೆರೆದ ಜನತೆಯ ಮನಮುಟ್ಟಿತು.

ಶಿವದ್ಯಾನ ಮಾಡಣ್ಣ ಸೇರಿದಂತೆ ಇತರೆ ಜಾನಪದ ಗಾಯನಗಳು ನೆರೆದ ಜನರನ್ನು ಕುಳಿತ ಜಾಗದಲ್ಲೇ ಮಂತ್ರಮುಗ್ದರನ್ನಾಗಿ ಹನುಮಂತನ ಗಾಯನದಲ್ಲಿ ತೇಲಿಸಿತು.

ಉಸ್ತುವಾರಿ ಸಚಿವ ಬಸವಂತಪ್ಪ, ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ, ಹೊಸಪೇಟೆ ಶಾಸಕ ಗವಿಯಪ್ಪ, ಹರಪನಹಳ್ಳಿ ಶಾಸಕಿ ಲತಾ ಎಂ ಪಿ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಇತರೆ ಗಣ್ಯರು, ರಾಜ್ಯಮಟ್ಟದ ಅಧಿಕಾರಿಗಳು ಜಿಲ್ಲಾಡಳಿತ ತಾಲೂಕು ಆಡಳಿತ ಉಪಸ್ಥಿತರಿದ್ದರು.