Home ಜಿಲ್ಲೆ ಕುರುಗೋಡು ಪೊಲೀಸ್ ಠಾಣೆ ಅಕ್ರಮ ಪಡಿತರ ಸಾಗಣೆ ಪ್ರಕರಣ

ಕುರುಗೋಡು ಪೊಲೀಸ್ ಠಾಣೆ ಅಕ್ರಮ ಪಡಿತರ ಸಾಗಣೆ ಪ್ರಕರಣ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.28: ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಬಾದನಹಟ್ಟಿ ಗ್ರಾಮದ ಹತ್ತಿರ ಯಲ್ಲಾಪುರ ರಸ್ತೆ ಕಡೆ ಇರುವ ನಂದಿ ಲೇಔಟ್ನಲ್ಲಿ (1) ಯಸ್ವಾಮಿ @ ಯರಿಶಂಕರಗೌಡ ವಾಸ ಕುರುಗೋಡು, (2) ಉಮೇಶ @ ಉಮಾಶಂಕರ ವಾಸ ಕುರುಗೋಡು ಇವರುಗಳು ಅಕ್ರಮವಾಗಿ ಪಡಿತರ ಅಕ್ಕಿ ಚೀಲಗಳನ್ನು ಸಂಗ್ರಹಿಸಿ (3) ವೀರಭದ್ರ ವಾಸ ಮಾನ್ವಿ (4) ವಿನೋಧ ವಾಸ ಮಾನ್ವಿ ರವರಿಗೆ ಸಾಗಾಣಿಕೆ ಮಾಡಲು ಲಾರಿ ನಂ-ಕೆಎ-36 ಸಿ-5899 ನೇದ್ದರಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಲೋಡ್ ಮಾಡಿ ನಿಲ್ಲಿಸಿದಾಗ ಕುರುಗೋಡು ಪೊಲೀಸ್ ಠಾಣೆಯ ಪಿ.ಎಸ್.ಐ. ಸುಪ್ರೀತ್ ವಿ. ಸಿಬ್ಬಂದಿಯವರಾದ ಶಿವರಾಯಪ್ಪ, ಪಕ್ಕೀರಪ್ಪ, ರಾಮಚಂದ್ರ ಮತ್ತು ಆಹಾರ ನಿರೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಪಿ. ರವರುಗಳು ಜಂಟಿಯಾಗಿ ದಾಳಿ ಮಾಡಿ. 5,52,500/-ರೂ. ಬೆಲೆಯ ಒಟ್ಟು 22,100 ಟನ್ ಪಡಿತರ ಅಕ್ಕಿ ಮತ್ತು 10,00,000(10ಲಕ್ಷ)ರೂ. ಮೌಲ್ಯದ ಆಶೋಕ್ ಲೈಲ್ಯಾಂಡ್ ಕಂಪನಿಯ ಲಾರಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

ಈ ಘಟನೆಯ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026 ಕಲಂ 3, 7, 6(ಎ) ಇ. ಸಿ. ಯಾಕ್ಟ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.