
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21: ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ನಾಲ್ವರು ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಸಿಬ್ಬಂದಿ ಕಾಲಹರಣ ಮಾಡುತ್ತಿದ್ದರ ಬಗ್ಗೆ ಬಂದ ದೂರಿಗೆ ಡಿಹೆಚ್ ಓ ಅಲಕಾನಂದ ಅವರು ಆ ಸಿಬ್ಬಂದಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ.
ಅ.19 ರಂದು ಕರ್ತವ್ಯದ ವೇಳೆ ಡಿಹೆಚ್ಒ ಕಚೇರಿಯ ಎಪ್ಡಿಎ ಗಿರೀಶ್ ಕರಣ್, ಎಸ್ ಡಿ ಎಗಳಾದ ವೈ.ಪ್ರಾನ್ಸಿಸ್, ಚಂದ್ರಶೇಖರ್ ಮತ್ತು ಗೋಪಾಲ್ ಹೆಚ್. ಅವರಿಗೆ ನೋಟೀಸ್ ಜಾರಿ ಮಾಡಿದ್ದು.
ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದು ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಕರ್ತವ್ಯದ ಅವಧಿಯಲ್ಲಿ ನಿರ್ಲಕ್ಷ್ಯ ಅಥವಾ ಕಾಲಹರಣ ನಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಡಿಹೆಚ್ ಓ ಹೇಳಿದ್ದಾರೆ.























