
ಮಂಗಳೂರು: ಕರ್ನಾಟಕದ ಕರಾವಳಿ ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಭಾನುವಾರ ವಾಣಿಜ್ಯ ಸಂಚಾರ ಆರಂಭಿಸಿದೆ. ಮೊದಲ ದಿನವೇ ಎಲ್ಲ ಟಿಕೆಟ್ಗಳು ಸೋಲ್ಡ್ಔಟ್ ಆಗಿದ್ದು, ರೈಲು ಭರ್ತಿಯಾಗಿ ಸಂಚರಿಸಿದೆ. ಈ ಮಾರ್ಗದಲ್ಲಿ ಶುಕ್ರವಾರ ಉದ್ಘಾಟನಾ ವಿಶೇಷ ರೈಲು ಸಂಚಾರ ನಡೆಸಿತ್ತು. ನಿಗದಿತ ಸಮಯಕ್ಕೆ ಯಶವಂತಪುರದಿAದ ಮಡ್ಗಾಂವ್ (ನಂ. ೨೬೬೫೫) ಹಾಗೂ ಮಡ್ಗಾಂವ್ನಿAದ ಯಶವಂತಪುರ(ನA. ೨೬೬೫೬) ವಯಾ ಮಂಗಳೂರು ಜಂಕ್ಷನ್ ಮೂಲಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಿದೆ. ಅದೇ ರೀತಿ ಗೊಮಟೇಶ್ವರ ಎಕ್ಸ್ಪ್ರೆಸ್ ರೈಲು ಕೂಡ ನಿಗದಿತ ವೇಳಾಪಟ್ಟಿಯಂತೆ ಬೆಂಗಳೂರಿನಿAದ ಮಂಗಳೂರಿಗೆ ಸಂಚರಿಸಿದೆ. ಬೆಂಗಳೂರಿನಿAದ ಆಗಮಿಸಿದ ವಂದೇ ಭಾರತ್ ಮತ್ತು ಮಂಗಳೂರಿನಿAದ ತೆರಳುತ್ತಿದ್ದ ವೀಕ್ಲಿ ಮಂಗಳೂರು-ಯಶವAತಪುರ ಎಕ್ಸ್ಪ್ರೆಸ್ ರೈಲಿಗೆ ಘಾಟ್ ಪ್ರದೇಶದ ಕಡಗರವಳ್ಳಿಯಲ್ಲಿ ಕ್ರಾಸಿಂಗ್ ನೀಡಲಾಗಿದೆ. ಯಶವಂತಪುರ ಹಾಗೂ ಮಡ್ಗಾಂವ್ನಿAದ ಹೊರಟ ಎರಡೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ನಿಗದಿತ ವೇಳೆಯಲ್ಲೇ ಸಂಚಾರ ನಡೆಸಿರುವುದು ಗಮನಾರ್ಹ. ಕೆಲವು ನಿಲ್ದಾಣಗಳಲ್ಲಿ ೫-೧೦ ನಿಮಿಷ ವಿಳಂಬವಾದರೂ ಮುಂದಿನ ನಿಲ್ದಾಣಗಳಲ್ಲಿ ನಿಗದಿತ ಸಮಯ ಕಾಯ್ದುಕೊಂಡು ಸಂಚರಿಸಿರುವುದು ಗಮನಾರ್ಹ.
ಮಡ್ಗಾಂವ್ನಿAದ ಯಶವಂತಪುರಕ್ಕೆ ಸಂಚರಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ನ ಎಲ್ಲ ಸೀಟುಗಳು ಭರ್ತಿಯಾಗಿವೆ. ಯಶವಂತಪುರದಿAದ ಮಡ್ಗಾಂವ್ಗೆ ಆಗಮಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ಬಹುತೇಕ ಭರ್ತಿಯಾಗಿದ್ದು, ಕೆಲವೇ ಸೀಟುಗಳು ಬಾಕಿ ಉಳಿದಿತ್ತು. ಮಡ್ಗಾಂವ್-ಯಶವAತಪುರ ವಂದೇ ಭಾರತ್ ಎಕ್ಸ್ಪ್ರೆಸ್ ಆಗಮಿಸಿದಾಗ ಉಡುಪಿ ರೈಲು ನಿಲ್ದಾಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಅಲ್ಲಿನ ರೈಲ್ವೆ ಯಾತ್ರಿ ಸಮಿತಿಯವರು ಸಿಹಿ ಹಂಚಿ ಸಂಭ್ರಮಿಸಿದರು. ಗೊಮಟೇಶ್ವರ ಎಕ್ಸ್ಪ್ರೆಸ್ ವೇಳಾಪಟ್ಟಿ ಸದ್ಯ ಬದಲಿಲ್ಲ:
ಮಂಗಳೂರು-ಬೆAಗಳೂರು ನಡುವೆ ನಿತ್ಯ ಓಡಾಟ ನಡೆಸುವ ಗೊಮಟೇಶ್ವರ ಎಕ್ಸ್ಪ್ರೆಸ್ ಹಗಲು ರೈಲಿನ ವೇಳಾಪಟ್ಟಿ ಸದ್ಯಕ್ಕೆ ಬದಲಾಗುವ ಸಾಧ್ಯತೆ ಇಲ್ಲ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ ಪ್ರಕಟವಾದ ಕ್ಷಣದಲ್ಲೇ ಗೊಮಟೇಶ್ವರ ಎಕ್ಸ್ಪ್ರೆಸ್(ನಂಬರ್ ೧೬೫೭೬) ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿತ್ತು. ಅದರಲ್ಲಿ ಬೆಳಗ್ಗೆ ೭ ಗಂಟೆ ಬದಲು ೧೧ ಗಂಟೆಗೆ ಮಂಗಳೂರು ಜಂಕ್ಷನ್ನಿAದ ಹೊರಟು ರಾತ್ರಿ ೧೦.೧೫ ಗಂಟೆಗೆ ಬೆಂಗಳೂರು ತಲುಪುವಂತೆ ವೇಳಾಪಟ್ಟಿ ಪರಿಷ್ಕರಿಸಲಾಗಿತ್ತು. ವಂದೇ ಭಾರತ್ ಸಂಚಾರಕ್ಕೆ ಇದರಿಂದ ಸಮಸ್ಯೆ ಇಲ್ಲದಿದ್ದರೂ ರೈಲ್ವೆ ಅಧಿಕಾರಿಗಳು ಗೊಮಟೇಶ್ವರ ಎಕ್ಸ್ಪ್ರೆಸ್ ರೈಲಿನ ಸಂಚಾರ ಸಮಯ ಬದಲಾಯಿಸಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು ಭೇಟಿ ವೇಳೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ರೈಲ್ವೆ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ರೈಲ್ವೆ ರಾಜ್ಯ ಸಚಿವ ಸೋಮಣ್ಣಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು. ಹೀಗಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವಾಣಿಜ್ಯ ಸಂಚಾರ ಆರಂಭಿಸಿದರೂ ಬೆಂಗಳೂರಿಗೆ ಗೊಮಟೇಶ್ವರ ಎಕ್ಸ್ಪ್ರೆಸ್ ಸಂಚಾರ ಸಮಯ ಬದಲಾವಣೆಯನ್ನು ಸದ್ಯದ ಮಟ್ಟಿಗೆ ರೈಲ್ವೆ ಇಲಾಖೆ ಕೈಬಿಟ್ಟಿದೆ ಎನ್ನಲಾಗಿದೆ.
ಘಟ್ಟದ ತಪ್ಪಲು, ಕರಾವಳಿ, ಬಯಲ ಸೀಮೆ ನಡುವಿನ ಸಂಚಾರ!
ವAದೇ ಭಾರತ್ ಎಕ್ಸ್ಪ್ರೆಸ್ ರೈಲು ಕರಾವಳಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಆಧುನಿಕ, ವೇಗದ ಮತ್ತು ಆರಾಮದಾಯಕ ರೈಲು ಸಂಪರ್ಕವನ್ನು ಒದಗಿಸಲಿದೆ.
ಯಶವಂತಪುರದಿAದ ಸಂಚರಿಸುವ ಈ ರೈಲು ಮಡಗಾಂವ್ ತಲುಪುವ ಮಾರ್ಗದಲ್ಲಿ ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಸುಮಾರು ೮೫೦ ಕಿ.ಮೀ. ದೂರವನ್ನು ಕ್ರಮಿಸಲಿದೆ. ಪ್ರಯಾಣಿಕರಿಗೆ ಪಶ್ಚಿಮ ಘಟ್ಟದ ತಪ್ಪಲು, ಕರಾವಳಿ ತೀರ ಹಾಗೂ ಬಯಲುಸೀಮೆಗಳ ಪ್ರಕೃತಿ ಸೌಂದರ್ಯದ ಆಹ್ಲಾದವನ್ನು ವಂದೇ ಭಾರತ್ ನೀಡಲಿದೆ.





















