Home ಜಿಲ್ಲೆ ಮಂಗಳೂರು ಉಬರಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

ಉಬರಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

ಸುಳ್ಯ:ಉಬರಡ್ಕ ಮಿತ್ತೂರು ನರಸಿಂಹ ಶಾಸ್ತಾವು ದೇವಾಲಯ, ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ೧೬ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ರೈ ಅರಮನೆಗುತ್ತು ವಹಿಸಿದ್ದರು.
ದೇವತಾರಾಧನ ಸಮಿತಿ ಕೋಶಾಧಿಕಾರಿ ಶಶಿಧರ ನಾಯರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯರಾದ ಪುರುಷೋತ್ತಮ ಗೌಡ ಮಾಣಿಬೆಟ್ಟು, ಮಿತ್ತೂರು ಜೋಡುದೈವಗಳ ಆಡಳಿತ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ನಾಟಿ ವೈದ್ಯೆ ಶ್ರೀಮತಿ ವಸಂತಿ ಜನಾರ್ಧನ ಗೌಡ ನಡುಮುಟ್ಲು, ನಿವೃತ್ತ ಆರೋಗ್ಯಾಧಿಕಾರಿ ರೇವತಿ ಮಡಿಯಾರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದೇವತಾರಾಧನ ಸಮಿತಿ ಅಧ್ಯಕ್ಷ ಶ್ಯಾಂ ಪಾನತ್ತಿಲ, ಶ್ರೀ ನರಸಿಂಹ ಶಾಸ್ತಾವು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್, ದೇವತಾರಾಧನ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು, ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತರಾಮ ಕುತ್ಯಾಡಿ, ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಸಂದೀಪ್ ಮದುವೆಗದ್ದೆ, ಉಬರಡ್ಕಮಿತ್ತೂರು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಉಪಸ್ಥಿತರಿದ್ದರು.
ಕು. ಸನ್ನಿಧಿ ಹುಳಿಯಡ್ಕ ಪ್ರಾರ್ಥಿಸಿದರು. ಸಂಚಾಲಕ ರಾಘವ ಬಿ.ರಾವ್ ಸ್ವಾಗತಿಸಿ, ಸೀತರಾಮ ಕುತ್ಯಾಡಿ ವಂದಿಸಿದರು.
ಬೇಬಿ ವಿದ್ಯಾ ಹಾಗೂ ರಾಜೇಶ್ವರಿ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.
ಸೋಮವಾರ ಊರಿನ ಅಂಗನವಾಡಿ, ಶಾಲಾ ಮಕ್ಕಳು, ಊರವರು ಹಾಗೂ ವಿದೂಷಿ ಜಯಶ್ರೀ ಮದುವೆಗದ್ದೆ ಇವರಿಂದ ನೃತ್ಯ ವೈಭವ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಶ್ರೀ ನರಸಿಂಹ ಶಾಸ್ತಾವು ಮಹಿಳಾ ಮತ್ತು ಮಕ್ಕಳ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ, ಬ್ಯಾಂಡು ವಾಲಗ, ಸಿಡಿಮದ್ದುಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆದು ಉಬರಡ್ಕದ ಹೊಳೆಯಲ್ಲಿ ಜಲಸ್ಥಂಭನಗೊಂಡಿತ್ತು.