
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,24- ನಗರದ ಹವಾಂಬಾವಿ ಪ್ರದೇಶದ ಅಶೋಕನಗರದ ಸಿದ್ದಾರೆಡ್ಡಿಗೆ ಹಿರೋ ಹೋಂಡಾ ಎಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ಈತನನ್ನು ಸ್ಲೆಂಡರ್ ಸಿದ್ದಾರೆಡ್ಡಿ ಎಂದು ಕರೆಯಲಾಗುತ್ತಿದೆ. ಕದಿಯುತ್ತಿದ್ದುದು ಈ ಕಂಪನಿಯ ಬೈಕ್ ಗಳನ್ನು ಮಾತ್ರ.
ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆ ಸೇರಿದಂತೆ ಹಲವಡೆ ಹೊಂಡಾ ಬೈಕ್ ಗಳನ್ನು ಕದ್ದು. ನೆರೆಯ ಆಂದ್ರಪ್ರದೇಶದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆಹಚ್ಚಿದಾಗ. ಸಿದ್ದಾರೆಡ್ಡಿ ಕದಿದ್ದಾನೆ. ಆಟೋ ಡ್ರೈವರ್ ಆಗಿರುವ ಈತ ಕಳೆದ ಒಂದು ವರ್ಷದಿಂದ 15 ದಿನದೊಳಗೆ ಒಂದು ಬೈಕ್ ಕದ್ದು ಅ ಬೈಕ್ ಗಳಿಗೆ ಬೇರೆ ಬೈಕ್ ನ ನಂಬರ್ ಪ್ಲೇಟ್ ಅಳವಡಿಸಿ, ಒನ್ ಸೆಂಟರ್ ಗಳಲ್ಲಿ ಆರ್ ಸಿ. ಕಾರ್ಡನ್ನು ಡೂಪ್ಲಿಕೇಟ್ ಪಡೆದು, ಸೆಕೆಂಡ್ ಹ್ಯಾಂಡಲ್ ಬೈಕ್ ಎಂದು ಮಾರಾಟ ಮಾಡುತ್ತಿದ್ದ.
ಈಗ ಪೊಲೀಸರು ಈತ ಕದ್ದು ಮಾರಾಟ ಮಾಡಿದ್ದ 41 ಬೈಕ್ ಪತ್ತೆ ಹಚ್ಚಿದ್ದು ಇದರಲ್ಲಿ 31 ಸ್ಲೆಂಡರ್ ಬೈಕ್ ಗಳಿವೆ.
ನಮ್ಮ ಸಿಬ್ಬಂದಿ ಈ ಪ್ರಕರಣದಲ್ಲಿ ಉತ್ತಮಕಾರ್ಯ ಮಾಡಿದ್ದಾರೆಂದು ಎಸ್ಪಿ ಡಾ.ಸುಮನ್ ಡಿಪಿ ಶ್ಲಾಘಿಸಿದ್ದಾರೆ.
ಈ ರೀತಿ ಸೆಕೆಂಡ್ ಹ್ಯಾಂಡಲ್ ಬೈಕ್ ತೆಗೆದುಕೊಳ್ಳುವವರು ಆರ್ ಟಿ ಓ ಕಚೇರಿಗೆ ತಕ್ಷಣ ಹೋಗಿ ಪರೀಶೀಲನೆ ಮಾಡಿಕೊಳ್ಳಬೇಕು ಎಂದಿದ್ದಾರೆ.































