Home ಜಿಲ್ಲೆ ಇಂದು ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ

ಇಂದು ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ

oplus_10485794

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ;ಸೆ,20- ನಗರದ ಸೆಂಟಿನರಿ ಹಾಲ್ ನಲ್ಲಿ ಹಿಂದೂ ಮಹಾ ಗಣಪತಿ ಉತ್ಸವ  ಸಮಿತಿಯಿಂದ ಪ್ರತಿಷ್ಟಾಪನೆ ಮಾಡಿದ್ದ ಮಹರಾಜ ಗಣೇಶನ ವಿಗ್ರಹದ ವಿಸರ್ಜನೆ ಇಂದು ಸಂಜೆ ನಡೆಯಲಿದೆ.

ಸಂಜೆ 4 ಕ್ಕೆ  ಗಣಪತಿಯ ಬೃಹತ್ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿದೆ. ಇಲ್ಲಿಂದ ಆರಂಭಗೊಂಡು ರಾಯಲ್ ಸರ್ಕಲ್,  ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಸರ್ಕಲ್,  ಮೋತಿ ಸರ್ಕಲ್ ನಿಂದ ಹೊಸ ಬಸ್ ನಿಲ್ದಾಣ, ಎಪಿಎಂಸಿ ಸರ್ಕಲ್  ಮೂಲಕ ಬೆಂಗಳೂರು ರಸ್ತೆಯ ತುಂಗಭದ್ರ ಹೆಚ್ ಎಲ್ ಸಿ ಕಾಲುವೆಯಲ್ಲಿ  ವಿಸರ್ಜನೆ ಮಾಡಲಿದೆ.

ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ  20 ಭಕ್ತರಿಗೆ ಡಿಪ್ ಮೂಲಕ ಸರ್ಣ ಲೇಪಿತ ಗಣೇಶ ವಿಗ್ರಹಗಳನ್ನು ಸಮಿತಿ ನೀಡಲಿದೆ.

ಮೆರವಣಿಗೆಯಲ್ಲಿ ಭೂತಕೋಲದ  ಆರಾಧನೆ,  ಮಲ್ಲಕಂಬ ಪ್ರದರ್ಶನ,  ಚಂಡೆ ಮದ್ದಳೆ ಮೊದಲಾದ ಸಾಂಸ್ಕೃತಿಕ ಕಲಾ ತಂಡಗಳ ಭಾಗವಹಿಸಲಿವೆ. ಡಿಜೆ ಬಳಕೆಗೆ ಪೊಲೀಸ್ ಇಲಾಖೆ ಅನುಮತಿನೀಡಿಲ್ಲವಾದರೂ ಸಮಿತಿಯವರು ಇತರೇ ನಗರಗಳಲ್ಲಿ  ಬಳಕೆಗೆ ಅನುವು ಮಾಡಿಕೊಟ್ಟಿ ವುದರಿಂದ ನಮಗೂ ಅನುವು ಮಾಡಿಕೊಡಿ ಎಂಬುದು ಭಕ್ತರ ಆಗ್ರಹವಾಗಿದೆ.