
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.24: ವಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವೃದ್ಧೆ ಬಲಿಯಾಗಿದ್ದಾಳೆಂಬ ಆರೋಪ ಕೇಳಿ ಬಂದಿದೆ.
ಏ. 9ರಂದು ವಿಮ್ಸ್ ಅಸ್ಪತ್ರೆ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿ ಅಕ್ಕಮ್ಮ ಎನ್ನುವ ವೃದ್ಧೆ ಬಾಯಿಯಲ್ಲಿನ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ದಾಖಲಾಗಿದ್ದರು.
ಏ. 17 ರಂದು ಆಪರೇಷನ್ ಕೂಡ ಮಾಡಲಾಗಿತ್ತು.
ಅಪರೇಷನ್ ಸೆಕ್ಸಸ್ ಅಗಿ ವೈದ್ಯರು ಚೆನ್ನಾಗಿ ನೋಡಿಕೊಂಡಿದ್ದಾರೆ.ಅದ್ರೇ ಅಪರೇಷನ್ ನಂತರ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವೃದ್ಧೆಯ ಸಾವಾಗಿದೆ ಎಂದು ಕುಟುಂಬಸ್ಥರು ಅರೋಪಿಸಿದ್ದಾರೆ.
ಟೈಮ್ ಟೈಮ್ ನೀಡಬೇಕಾದ ಯಾವುದೇ ರೀತಿಯ ಇಂಜೆಕ್ಷನ್, ಟ್ಯಾಬ್ಲಟ್ ಸೇರಿದಂತೆ ಇತರೆ ಟ್ರಿಟ್ಮೆಂಟ್ ನೀಡಿಲ್ಲ.ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ರೇ ವೃದ್ದೆ ಅಕ್ಕಮ್ಮ ಬದುಕುತ್ತಿದ್ರು. ಆದ್ರೇ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಅಕ್ಕಮ್ಮ ಸಾವಾಗಿದೆ ಎಂದು ಕುಟುಂಬ ಸದಸ್ಯ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ























