Home ಜಿಲ್ಲೆ ಮಂಗಳೂರು ಅಟೋರಿಕ್ಷಾಗಳಿಗೆ `ಪುತ್ತೂರು ದೀಪೋತ್ಸವ’ ಸ್ಟಿಕ್ಕರ್

ಅಟೋರಿಕ್ಷಾಗಳಿಗೆ `ಪುತ್ತೂರು ದೀಪೋತ್ಸವ’ ಸ್ಟಿಕ್ಕರ್

ಪುತ್ತೂರು: ಜನಸಾಮಾನ್ಯರ ಓಡಾಟಕ್ಕೆ ಪೂರಕವಾಗಿರುವ ಅಟೋ ರಿಕ್ಷಾಗಳಿಗೆ ಪುತ್ತೂರು ದೀಪೋತ್ಸವದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ಪುತ್ತೂರು ದೇವಳದ ಎದುರಿನ ದೇವರಮಾರುಗದ್ದೆಯಲ್ಲಿ ನಡೆಯಿತು.

ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಬಾರ ಮಹಾಲಿಂಗೇಶ್ವರ ದೇವಳದ ಸಹಯೋಗದೊಂದಿಗೆ ನಡೆಯಲಿರುವ ಪುತ್ತೂರು ದೀಪೋತ್ಸವ ಧಾರ್ಮಿಕತೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಿಂಬಿಸುವ ಕಾರ್ಯಕ್ರಮವಾಗಿ ಮೂಡಿಬರಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಹಿನ್ನಲೆಯಲ್ಲಿ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ನಿರಂತರವಾಗಿ ಓಡಾಡುವ ಅಟೋರಿಕ್ಷಾಗಳಿಗೆ ಸ್ಟಿಕ್ಕರ್ ಅಳವಡಿಕೆ ಮಾಡುವ ಮೂಲಕ ಜನತೆಗೆ ಈ ಕಾರ್ಯಕ್ರಮ ಮಾಹಿತಿ ನೀಡುವ ಕೆಲಸ ನಡೆಯಲಿದೆ.

ಅಟೋ ರಿಕ್ಷಾಗಳ ಚಾಲಕರಿಗೆ ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಸಾಮಾಜಿಕ ಧುರೀಣರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಸ್ಟಿಕ್ಕರ್ ಹಸ್ತಾಂತರಿಸಿದರು. ಸಮಿತಿ ಸಭೆಯಲ್ಲಿ ಕಾರುಗಳಿಗೆ ಸ್ಟಿಕ್ಕರ್ ಅಳವಡಿಕೆ ಬಗ್ಗೆ ನಿರ್ಧರಿಸಲಾಗಿತ್ತು. ಅದೇ ರೀತಿ ಅಟೋರಿಕ್ಷಾಗಳಿಗೂ ಸ್ಟಿಕ್ಕರ್ ಅಳವಡಿಕೆ ಮಾಡುವ ಮುಖಾಂತರ ಹೆಚ್ಚು ಪ್ರಚಾರ ನಡೆಸಲು ಸಮಿತಿ ಈ ಕಾರ್ಯಕ್ರಮಕ್ಕೆ ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಪುತ್ತೂರು ದೀಪೋತ್ಸವ ಸಂಚಾಲಕ ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಕೋಶಾಧಿಕಾರಿ ದಾಮೋದರ ಪಾಟಾಳಿ, ಯುವರಾಜ ಪೆರಿಯತ್ತೋಡಿ ಭಾಗಿಯಾಗಿದ್ದರು. ಸುಜೀರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ದೀಪೋತ್ಸವ ಕಾರ್ಯಕ್ರಮ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಇದೊಂದು ವಿನೂತನ ಕಾರ್ಯಕ್ರಮವಾಗಿ ಪರಿವರ್ತನೆಯಾಗಬೇಕು. ಇದಕ್ಕೆ ಭಕ್ತರು ತಂಡೋಪತAಡವಾಗಿ ಆಗಮಿಸಬೇಕು. ಈ ನಿಟ್ಟಿನಲ್ಲಿ ಪ್ರತೀ ಗ್ರಾಮಕ್ಕೂ ಮಾಹಿತಿ ನೀಡಬೇಕು. ಅಟೋ ರಿಕ್ಷಾ ಚಾಲಕರು ಪ್ರತೀ ಊರಿಗೂ ಹೋಗುತ್ತಾರೆ. ರಿಕ್ಷಾದಲ್ಲಿ ಸ್ಟಿಕ್ಕರ್ ಅಳವಡಿಕೆ ಮಾಡಿದರೆ ಜನತೆಗೆ ಮಾಹಿತಿ ಸಿಗುತ್ತದೆ. ಈ ಉದ್ದೇಶದಿಂದ ರಿಕ್ಷಾ ಚಾಲಕರಿಗೆ ಕೇಳಿಕೊಂಡಾಗ ಎಲ್ಲರೂ ಒಪ್ಪಿದ್ದಾರೆ. ಪುತ್ತೂರಿನ ಪ್ರತೀ ರಿಕ್ಷಾ ಪಾರ್ಕ್ಗಳಲ್ಲಿಯೂ ಹೋಗಿ ಸ್ಟಿಕ್ಕರ್ ಹಂಚುವ ಯೋಜನೆ ಇದೆ. ಪ್ರತಿಯೊಂದು ರಿಕ್ಷಾದಲ್ಲಿಯೂ ಪುತ್ತೂರು ದೀಪೋತ್ಸವದ ಸ್ಟಿಕ್ಕರ್ ಅಳವಡಿಕೆ ಮಾಡುವ ಯೋಚನೆ ಇದೆ- ರವೀಂದ್ರ ಶೆಟ್ಟಿ ನುಳಿಯಾಲು ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷರು.