
ಬೆಂಗಳೂರು, ಜೂ. 30- ಅಮೆರಿಕದ ಕ್ಯಾಲಿಫೆÇೀರ್ನಿಯಾದಲ್ಲಿರುವ ಪ್ರಮುಖ ಕನ್ನಡಿಗರ ಸಂಸ್ಥೆಯಾದ ಕನ್ನಡಸಂಘ ಆಫ್ ಸ್ಯಾಕ್ರಮೆಂಟೋ (ಕೆ.ಎಸ್.ಎಸ್) ವತಿಯಿಂದ ಈಚೆಗೆ `ರಂಗ ವಸಂತ’ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಯಿತು.
ಜೊರಾಸ್ಟ್ರಿಯನ್ ಸೆಂಟರಿನಲ್ಲಿ ಬಿ.ಎ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಂಚೋ ಕೋರ್ಡೋವಾದ ಮಾಜಿ ಮೇಯರ್ ಸಿರಿ ಪುಲಿಪತಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
‘ಸ.ರಿ.ಗ.ಮ.ಪ’ ಖ್ಯಾತಿಯ ಕುಮಾರಿ ಸುಪ್ರಿಯಾ ಜೋಶಿ ಚೈತ್ರಸಂಗೀತ ಪ್ರಸ್ತುತಪಡಿಸಿದರಲ್ಲದೆ, ‘ಕಲಾಧಾರ ಕಲಾ ಅಕಾಡೆಮಿ’ಯ ಕಲಾವಿದರು ಭರತನಾಟ್ಯ ಪ್ರದರ್ಶಿಸಿದರು. ನ್ಯೂಜೆರ್ಸಿಯಿಂದ ಆಗಮಿಸಿದ್ದ ಕರ್ನಾಟಕದ ‘ಹಂಸರತ್ನ’ ಹಾಗೂ ಅಮೆರಿಕನ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ವೇವ್ಸ್ ಕೇರ್ ಫೌಂಡೇಷನ್ ಸಂಸ್ಥೆಯ ಸಿಇಒ ಹಾಗೂ ಪ್ರಸಿದ್ಧ ಹಿನ್ನೆಲೆ ಗಾಯಕಿ ಕನ್ನಡತಿ ವಸಂತಾ ಶಶಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ದ.ರಾ. ಬೇಂದ್ರೆಯವರ ಭಾವಗೀತೆಗಳು, ಫ್ಯೂಷನ್ ಸಂಗೀತ ಹಾಗೂ ಡಾ. ರಾಜಕುಮಾರ್ ಮತ್ತು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನಪ್ರಿಯ ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸಿ ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿಸಿದರು. ಇವರಿಗೆ ಶ್ರೇಯಸ್ ಚೌಹಾಣ್, ಸ್ಥಳೀಯ ಕಲಾವಿದರಾದ ವಿಕ್ರಮ್ ಮತ್ತು ವಾಸು ಸಾಥ್ ನೀಡಿದರು. ಕೊನೆಯಲ್ಲಿ ಮಹಿಳೆಯರ ಕನ್ನಡ ಕೋಲಾಟದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಇದೇ ಸಂದರ್ಭದಲ್ಲಿ ಕೆ.ಎಸ್.ಎಸ್ ಸಂಸ್ಥೆಯು ಸ್ಥಳೀಯ ದತ್ತಿ ಸಂಸ್ಥೆಯಾದ ‘ಊಂಖಖಿ ಆಫ್ ಫೆÇೀಲ್ಸಮ್’ ಮತ್ತು ಭಾರತದ ‘ಕೃತಜ್ಞತಾ ಟ್ರಸ್ಟ್’ ಸಂಸ್ಥೆಗಳಿಗೆ ದೇಣಿಗೆ ನೀಡಲು ವರ್ಷವಿಡೀ ಕನ್ನಡಿಗ ಸಮುದಾಯದಿಂದ ಧನಸಹಾಯ ಸಂಗ್ರಹಿಸುವುದಾಗಿ ಕೆ.ಎಸ್.ಎಸ್ ಪ್ರಕಟಿಸಿತು.


























