Home ಜಿಲ್ಲೆ ಮೈಸೂರು ವೋಟ್ ಚೋರಿ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಸ್‍ಐ ಆರ್ ಪ್ರಯೋಗ: ಕೆಪಿಸಿಸಿ ವಕ್ತಾರ...

ವೋಟ್ ಚೋರಿ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಸ್‍ಐ ಆರ್ ಪ್ರಯೋಗ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಆ.03:
ದೇಶದಾದ್ಯಂತ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವು ವೋಟ್ ಚೋರಿ ಮೂಲಕ ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿಯೂ ಸಹ ಅಧಿಕಾರದ ಚುಕ್ಕಾಣಿ ಹಿಡಿಯಲು ಎಸ್ ಐಆರ್ ಪ್ರಯೋಗ ಮಾಡುವ ಪ್ರಯತ್ನ ನಡೆಸುತ್ತಿದೆಯೆಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.


ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 5 ಕೋಟಿ 56 ಲಕ್ಷ ಮತದಾರರು ನೊಂದಣಿಯಾಗಿದ್ದು ಇವರ ಪೈಕಿ 1ಕೋಟಿ5ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕಿದರೆ. ಡೆತ್, ಡಿಲಿಟ್, ಅಥರ್ಸ್, ಆಬ್ಸೆಂಟ್ ಎಂಬ ಕಾರಣಗಳನ್ನು ನೀಡಿ ಇಷ್ಟು ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಮೈಸೂರು ಜಿಲ್ಲೆಯಲ್ಲಿ 565869, ಪಿರಿಯಾಪಟ್ಟಣದಲ್ಲಿ 21795 ಮತದಾರರನ್ನು ಪಟ್ಟಿಯಿಂದ ಹೊರಗಿದ್ದಾರೆ. ಸ್ಥಳೀಯ ಶಾಸಕರಾದ ಕೆ.ವೆಂಕಟೇಶ ಮತ್ತು ಅವರ ಮಗ ನಿತಿನ್ ವೆಂಕಟೇಶ್ ಅವರ ನಿರಂತರ ಪ್ರಯತ್ನ, ಬಿಎಲ್ ಎ,ಕಾರ್ಯಕರ್ತರ ಶ್ರಮದಿಂದಾಗಿ ತಾಲೂಕಿನಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮತದಾರರು ಮ್ಯಾಪಿಂಗ್ ಮುಗಿದಿದೆ. ಮೈಸೂರಿನ ಚಾಮರಾಜ, ಕೃಷ್ಣರಾಜ , ನರಸಿಂಹರಾಜ ಕ್ಷೇತ್ರಗಳಲ್ಲಿ ಹೆಚ್ಚು ಮತದಾರರು ಪಟ್ಟಿಯಿಂದ ಹೊರ ಉಳಿದಿದ್ದಾರೆ ಪಿರಿಯಾಪಟ್ಟಣ ಕ್ಷೇತ್ರದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಉಳಿದಿರುವ 5 ದಿನದಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದರೆ ಮತ್ತಷ್ಟು ಮತದಾರರನ್ನು ಪಟ್ಟಿಗೆ ಸೇರ್ಪಡಿಸಬಹುದು.


ಬಿಎಲ್‍ಓ ಗಳು ಮತದಾರರಿಗೆ ಸರಿಯಾದ ಮಾಹಿತಿ ನೀಡದೇ ಅವರು ನೀಡುವ ಅರ್ಜಿಗಳನ್ನು ಡಿಜಿಟಲ್ ಮಾಡುತ್ತಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ನೋಟಿಸ್ ನೀಡಿ ತಹಶೀಲ್ದಾರ ಕಚೇರಿಯನ್ನು ಅಲೆಯುವಂತೆ ಮಾಡುತ್ತಾರೆ.ಕೆಲವು ಭಾಗಗಳಲ್ಲಿ 2002 ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಪರವಾಗಿಲ್ಲ ಎನ್ವರೇಷನ್ ಫಾರಂ ಭರ್ತಿ ಮಾಡಿ ಸಾಕು ಎನ್ನುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಗಣತಿ ನಮೂನೆಯನ್ನು ಬಿಎಲ್‍ಓ ಗಳು ತಾವೇ ಭರ್ತಿ ಮಾಡಿಕೊಂಡು ತಪ್ಪು ತಪ್ಪು ಮಾಹಿತಿ ಬರೆದು ಅನಂತರ ಸರಿಮಾಡಿದರೆ ಇಂತಹವರಿಗೆ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿದೆಯೆಂದು ಎಲ್ಲರೂ ಅರಿಯಬೇಕು. ಎಸ್‍ಐಆರ್ ಪ್ರಕ್ರಿಯೆಯು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿದ್ದು ಇವರು ನೇಮಿಸುವ ಅಧಿಕಾರಿಗಳು ಇವರ ನೆರಳಿನಲ್ಲಿ ಕೆಲಸ ನಿರ್ವಹಿಸುತ್ತಾರೆ ಇದರಿಂದ ನೇರವಾಗಿ ಹಿಂದುಳಿದ ವರ್ಗದವರು,ಅಲ್ಪಸಂಖ್ಯಾತರು, ಎಸ್ ಸಿ , ಎಸ್.ಟಿ ಸಮುದಾಯವನ್ನು ಗುರಿಯಾಗಿದ್ದಾರೆ ಇದಕ್ಕೆ ಕಾರಣವೆಂದರೆ ಈ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬೆಂಬಲಿಸುತ್ತಾರೆ ಎಂಬುದು ಇದಕ್ಕೆ ಕಾರಣವಾಗಿದೆ
ಎಂದರು.


ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ ತಾಲೂಕಿನಲ್ಲಿ ಸರಿಸುಮಾರು199000 ಮತದಾರರಿದ್ದು ಇದರಲ್ಲಿ 21700 ಮತದಾರರು ವಿವಿಧ ಕಾರಣಗಳಿಂದ ಕೈಬಿಡಲಾಗಿದೆ ಇದರಲ್ಲಿ 7156 ಮಂದಿ ಡೆತ್ ,10000 ಮತದಾರರು ಬೇರೆ ಕಡೆ ಹೆಸರು ಇದೆ ಎಂದು ಮ್ಯಾಪಿಂಗ್ ಮಾಡಲಾಗಿದೆ.ಇದೇ ತಿಂಗಳು 8 ನೇ ತಾರೀಕು ಗಣತಿ ನಮೂನೆ ಅರ್ಜಿ ನೀಡಲು ಕೊನೆಯ ದಿನವಾಗಿದೆ.ಅದರಿಂದ ತಾಲ್ಲೋಕಿನ ಎಲ್ಲ ಮತದಾರರು ಪಟ್ಟಿಯಿಂದ ಹೊರಗುಳಿಯದೆ ಅಗತ್ಯವಿರುವ ದಾಖಲೆಗಳನ್ನು ನೀಡಿ ಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಬೇಕು.ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ತಾಲೂಕಿನಲ್ಲಿ ಶೇಕಡಾ 90 ರಷ್ಟು ಮತದಾರರನ್ನು ಅಪೆÇ್ಲೀಡ್ ಮಾಡಲಾಗಿದೆ
ಆದರೂ ಇವರಲ್ಲಿ 15000 ದಿಂದ 20000 ಮತದಾರರಿಗೆ ನೋಟಿಸ್ ನೀಡುತ್ತಾರೆ ಎಂಬ ಮಾಹಿತಿಯಿದೆ ಎಂದರು.
ಈ ಸಂದರ್ಭದಲ್ಲಿ ನಗರಘಟಕ ಅಧ್ಯಕ್ಷ ಅಶೋಕ ಕುಮಾರ್ ಗೌಡ, ರಘು ಉಪಸ್ಥರಿದ್ದರು.